Bengaluru 22°C
Ad

ನ. 3ರಂದು ಉಡುಪಿ ರಂಗಭೂಮಿ ಸಂಸ್ಥೆಯ 60ರ ಸಂಭ್ರಮ ಉದ್ಘಾಟನೆ

ನ. 3ರಂದು ಉಡುಪಿ ರಂಗಭೂಮಿ ಸಂಸ್ಥೆಯ 60ರ ಸಂಭ್ರಮ ಉದ್ಘಾಟನೆ

ಉಡುಪಿ: ರಂಗಭೂಮಿ ಉಡುಪಿ ಇದರ 60ರ ಸಂಭ್ರಮದ ಉದ್ಘಾಟನಾ ಸಮಾರಂಭವು ನ. 3ರಂದು ಸಂಜೆ 4.30ಕ್ಕೆ ಉಡುಪಿ ಕುಂಜಿಬೆಟ್ಟಿನ ಶಾರದಾ ರೆಸಿಡೆನ್ಸಿಯಲ್ ಶಾಲೆಯ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

Ad

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಉಡುಪಿ ನಗರ ಪ್ರೌಢಶಾಲೆಗಳಲ್ಲಿ ರಂಗತರಬೇತಿ ಹಾಗೂ ನಾಟಕ ತಯಾರಿ ಪ್ರಕ್ರಿಯೆಯ ” ರಂಗಭೂಮಿ ರಂಗ ಶಿಕ್ಷಣ” ಅಭಿಯಾನ ಮತ್ತು ಉಡುಪಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ನಾಟಕ ರಂಗದ ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ “ರಂಗಭಾಷೆ” ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದರು.

Ad

ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಮೊದಲು ಕಲಾಮಯಂ ಉಡುಪಿ ಇದರ ಕಲಾವಿದರು “ರಂಗಗೀತೆ ಹಾಗೂ ಜಾನಪದ ಗೀತೆ” ಪ್ರಸ್ತುತಪಡಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ತಿಳಿಸಿದರು.

Ad
Ad
Ad
Nk Channel Final 21 09 2023