ಉಡುಪಿ: 6 ನಕ್ಸಲರ ಶರಣಾಗತಿ ವಿಚಾರ ವಾಗಿ ಮಾತನಾಡಿ, ನನ್ನ ಸಹೋದರ ವಿಕ್ರಂ ಗೌಡನಿಗೂ ಇದೆ ರೀತಿ ಶರಣಾಗಲು ಅವಕಾಶ ನೀಡಬೇಕಿತ್ತು ಎಂದು ಸಹೋದರ ಸುರೇಶ್ ಗೌಡ ಹೇಳಿಕೆ ನೀಡಿದರು.
ಹೆಬ್ರಿಯಲ್ಲಿ ಎನ್ಕೌಂಟರ್ ಗೆ ಬಲಿಯಾದ ವಿಕ್ರಂ ಗೌಡ ಸಹೋದರ ಸುರೇಶ್ ಗೌಡ ಬೇಸರ ವ್ಯಕ್ತಪಡಿಸಿದರು. ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ ನೀಡಿ ಎಂದು ಮನವಿ ಮಾಡಿದರು. ನವೆಂಬರ್ 18 ರಂದು ANF ಗುಂಡೇಟಿಗೆ ವಿಕ್ರಂ ಗೌಡ ಬಲಿಯಾಗಿದ್ದು, ಇದೀಗ ವಿಕ್ರಂ ಗೌಡ ತಂಡಲ್ಲಿದ್ದ ನಕ್ಸಲರು ಶರಣಾಗತಿಯಾಗಿದ್ದಾರೆ.
ಶರಣಾಗತಿ ಬಗ್ಗೆ ಎನ್ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಸಹೋದರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಕ್ಸಲ್ ಶರಣಾಗತಿ ಒಳ್ಳೆ ವಿಚಾರ ಮುಂದೆ ಉತ್ತಮ ಜೀವನ ನಡೆಸಲಿ. ನನ್ನ ಅಣ್ಣನಿಗೆಯಾದ ಪರಿಸ್ಥಿತಿ ಮುಂದೆ ಯಾರಿಗೂ ಆಗಬಾರದು. ಅವರ ಕುಟುಂಬಸ್ಥರು ನೋವು ಅನುಭವಿಸಬಾರದು. ಈ ಯೋಜನೆ ಮೊದಲೇ ಘೋಷಣೆ ಮಾಡಿದ್ರೆ ನನ್ನ ಅಣ್ಣನೂ ಶರಣಾಗುತ್ತಿದ್ದ. ಒಳ್ಳೆಯ ಜೀವನ ನಮ್ಮೊಂದಿಗೆ ನಡೆಸುತ್ತಿದ್ದ. ಸ್ವಲ್ಪ ದಿನ ಜೈಲು ವಾಸ ಅನುಭವಿಸಿ ಮುಂದೆಯಾದರೂ ಒಳ್ಳೆಯ ಜೀವನ ನಡೆಸೋ ಅವಕಾಶ ಇತ್ತು ಎಂದರು.
ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ ವಸತಿ ನಮಗೂ ನೀಡಿ. ನಾವು ಬಹಳ ಕಷ್ಟದಲ್ಲಿದ್ದೇವೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮನ್ನು ಇಲ್ಲಿಯವರೆಗೆ ಯಾವುದೇ ಸಮಿತಿ ಭೇಟಿ ಮಾಡಿಲ್ಲ. ಅಧಿಕಾರಿಗಳ ಕಿರಯಕುಳದಿಂದ ಅಣ್ಣ ನಕ್ಸಲ್ ಹೋರಾಟಕ್ಕೆ ಇಳಿದಿದ್ದ. ಅಣ್ಣನಿಗೆ ಮಾನಸಿಕ ಕಿರುಕುಳ ಅಧಿಕಾರಿಗಳು ನೀಡಿದ್ದರು. ಎನ್ಕೌಂಟರ್ ಬಗ್ಗೆಯೂ ತನಿಖೆಯಾಗಲಿ, ನಮಗೂ ಪರಿಹಾರ ನೀಡಲಿ ಎಂದು ಸರ್ಕಾರಕ್ಕೆ ವಿಕ್ರಂ ಗೌಡ ಸಹೋದರ ಮನವಿ ಮಾಡಿಕೊಂಡರು.