Bengaluru 29°C
Ad

ಪರಿಸರದಲ್ಲಿ ಕಸ ಹಾಕಿದರೆ 5 ಸಾವಿರದಿಂದ 10 ಸಾವಿರ ರೂಪಾಯಿ ದಂಡ : ರೂಪಾ.ಟಿ.ಶೆಟ್ಟಿ

ಪುರಸಭಾ ವ್ಯಾಪ್ತಿಯಲ್ಲಿರುವ 2ನೇ ವಾರ್ಡ್ ನ ಕಲ್ಲೋಟ್ಟೆ ಸದ್ಭಾವನಾ ನಗರದ ಪರಿಸರದಲ್ಲಿ ಕಸದ ರಾಶಿ ಅಲ್ಲಲ್ಲಿ ಕಂಡು ಬಂದಿದ್ದು, ಸಾರ್ವಜನಿಕರು ಕಸ ಗಳನ್ನು ಪುರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡಬೇಕಾಗಿ ಕಾರ್ಕಳ ಪುರಸಭಾ ಮುಖ್ಯಧಿಕಾರಿ ರೂಪಾ. ಟಿ. ಶೆಟ್ಟಿ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿರುವ 2ನೇ ವಾರ್ಡ್ ನ ಕಲ್ಲೋಟ್ಟೆ ಸದ್ಭಾವನಾ ನಗರದ ಪರಿಸರದಲ್ಲಿ ಕಸದ ರಾಶಿ ಅಲ್ಲಲ್ಲಿ ಕಂಡು ಬಂದಿದ್ದು, ಸಾರ್ವಜನಿಕರು ಕಸ ಗಳನ್ನು ಪುರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡಬೇಕಾಗಿ ಕಾರ್ಕಳ ಪುರಸಭಾ ಮುಖ್ಯಧಿಕಾರಿ ರೂಪಾ. ಟಿ. ಶೆಟ್ಟಿ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಇದೇ ರೀತಿ ಈ ಪರಿಸರದಲ್ಲಿ ಕಸಗಳನ್ನು ಹಾಕಿದ್ದು ಯಾರೆಂದು ಕಂಡು ಬಂದಲ್ಲಿ ಅವರಿಗೆ ಐದು ಸಾವಿರದಿಂದ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಪುರಸಭಾ ಮುಖ್ಯಧಿಕಾರಿ ರೂಪಾ ಟಿ. ಶೆಟ್ಟಿ, ಆರೋಗ್ಯ ಅಧಿಕಾರಿ ಲೈಲಾ ಥೋ ಮಸ್, ಸುದೇಶ್, ಹಾಗೂ ವಾರ್ಡ್ ಸದಸ್ಯರು ನೀತಾ ಆಚಾರ್ಯ ಪುರ ಸಭಾ 2ನೇ ವಾರ್ಡ್, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad