Ad

ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 45 ಡೆಂಗಿ ಪ್ರಕರಣ ಪತ್ತೆ : ಕ್ರಮಕ್ಕೆ ಸೂಚನೆ

ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 45 ಡೆಂಗಿ ಪ್ರಕರಣ ವರದಿಯಾಗಿದ್ದು, ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಳ್ಳೆ ಉತ್ಪತ್ತಿಯಾಗುವ ತಾಣಗಳಿಗೆ ಔಷಧಿ ಸಿಂಪಡಿಸಲಾಗಿದೆ. ಡೆಂಗಿ ಪ್ರಕರಣ ಹತೋಟಿಗೆ ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 45 ಡೆಂಗಿ ಪ್ರಕರಣ ವರದಿಯಾಗಿದ್ದು, ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಳ್ಳೆ ಉತ್ಪತ್ತಿಯಾಗುವ ತಾಣಗಳಿಗೆ ಔಷಧಿ ಸಿಂಪಡಿಸಲಾಗಿದೆ. ಡೆಂಗಿ ಪ್ರಕರಣ ಹತೋಟಿಗೆ ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Ad
300x250 2

ಉಡುಪಿ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕು ವ್ಯಾಪ್ತಿಯಲ್ಲಿ 12 ಆನೆಕಾಲ ರೋಗ ಪತ್ತೆೆಯಾಗಿದ್ದು, ಚಿಕಿತ್ಸೆೆ ನೀಡಲಾಗುತ್ತಿದೆ. ರೋಗಿಗಳು ಗುಣಮುಖರಾಗುತ್ತಿದ್ದಾರೆ. ಆನೆಕಾಲು ರೋಗದ ನಿರ್ಮೂಲನೆಗೆ ಇಲಾಖೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಲಸೆ ಕಾರ್ಮಿಕರಲ್ಲಿ ಈ ರೋಗ ಹೆಚ್ಚು ಕಾಣಿಸುತ್ತಿದೆ. 768 ಮಂದಿಗೆ ಪರೀಕ್ಷೆೆ ಮಾಡಿದ್ದು, 12 ಮಂದಿಯಲ್ಲಿ ರೋಗ ಪತ್ತೆಯಾಗಿದೆ. ಅವರಿಗೆ ಚಿಕಿತ್ಸೆೆ ನೀಡಲಾಗುತ್ತಿದೆ. ಈವರೆಗೆ 16 ಕ್ಷಯ ರೋಗ ಪತ್ತೆಯಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲಾಖೆಯಿಂದ ಅಗತ್ಯ ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ ಎಂದರು.

ಹೆರ್ಗಾ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ 48 ಅಡಕೆ ಮರಗಳಿಗೆ ಹಾನಿಯಾಗಿದ್ದು, ಪರಿಹಾರ ಒದಗಿಸಲಾಗಿದೆ. ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳು ಮೆಣಸು, ತೆಂಗು ಗಿಡ ಬೆಳೆಸಲಾಗಿದ್ದು, ಶೀಘ್ರ ಸಾರ್ವಜನಿಕ ವಿತರಣೆ ಆರಂಭಿಸಲಾಗುತ್ತದೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಾ.ಪಂ. ಆಡಳಿತಾಧಿಕಾರಿ ರವೀಂದ್ರ ಮಾತನಾಡಿ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಲ್ಲಿಯೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆನೆಕಾಲು ರೋಗ, ಮಲೇರಿಯಾ, ಡೆಂಗಿ ಹತೋಟಿಗೆ ಹಾಗೂ ರೋಗಿಗಳಿಗೆ ಅಗತ್ಯ ಚಿಕಿತ್ಸೆೆ ನೀಡಲು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ತಾ. ಪಂ. ಕ್ರಿಯಾಯೋಜನೆ ಸಂಬಂಧಿಸಿ ಆರೋಗ್ಯ, ಶಿಕ್ಷಣ, ಬಿಸಿಎಂ ಸಹಿತ ವಿವಿಧ ಇಲಾಖೆ ಕಾಮಗಾರಿಗಳಿಗೆ ಪ್ರಸ್ತಾವನೆ ನೀಡುವಂತೆ ಸೂಚಿಸಿದರು. ಸಭೆಯಲ್ಲಿ 16 ಗ್ರಾಪಂಗಳು ಮಂಡಿಸಿದ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ತಾಪಂ ಇಒ ವಿಜಯ, ಲೆಕ್ಕಾಧಿಕಾರಿ ಲತಾ ಸಭೆಯಲ್ಲಿ ಇದ್ದರು.

Ad
Ad
Nk Channel Final 21 09 2023
Ad