ಉಡುಪಿ : ಉಡುಪಿ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ ಕರ್ನಾಟಕ ಕೇರಳ ಇದರ ವತಿಯಿಂದ 16ನೇ ವರ್ಷದ “ಕೊರಗರ ಭೂಮಿ ಹಬ್ಬವು” ಪೆರ್ನಾಲ್‌ನ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಇಂದು ನಡೆಯಿತು.ಕಾರ್ಯಕ್ರಮದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ನ್ಯಾಯಾಧೀಶರಾದ ಬಾಲರಾಜ್ ಕೋಡಿಕಲ್ ಅವರು ದ್ವಜಾರೋಹಣ ನೆರವೇರಿಸಿ, ಹಬ್ಬದ ಶುಭ ಸಂದೇಶ ನೀಡಿದರು ಬಳಿಕ ಬೇಬಿ ಮಧುವನ ಹಾಗೂ ಪ್ರತೀಕ್ಷಾ ಶಂಕರ ನಾರಾಯಣ ಅವರು ಹಬ್ಬದ ಜ್ಯೋತಿ ಬೆಳಗಿಸಿದರು.
ಬಳಿಕ ಮಾತನಾಡಿದ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಅವರು, ಹಬ್ಬದ ಶುಭ ಸಂದೇಶ ನೀಡಿ, ಸಮುದಾಯದವರು ಸರಕಾರದಲ್ಲಿ ಇರುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮುದಾಯದ ಯುವ ಜನತೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಹಾಗೂ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಬೇಕಾಗಿ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರು ಮಾತನಾಡಿ, ಸಮಾಜದಲ್ಲಿ ಶಿಸ್ತು ಬದ್ದವಾಗಿರುವ ಸಮುದಾಯ ಕೊರಗ ಸಮುದಾಯ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಈ ಭೂಮಿಯ ಮೂಲ ನಿವಾಸಿಗಳು ಅವರ ಭೂಮಿಯ ಹಕ್ಕಿಗಾಗಿ ಅಹೋರಾತ್ರಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಕಂಡು ಬೇಸರವಾಯಿತು ಎಂದರು.
ಈ ವೇಳೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ನ್ಯಾಯಾಧೀಶರಾದ ಬಾಲರಾಜ್ ಕೋಡಿಕಲ್ ಅವರು ಮಾತನಾಡಿ ಸಮುದಾಯವು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಹಾಗೂ ಸಮುದಾಯದ ಏಳಿಗೆಗೆ ಹೋರಾಟ ಅನಿವಾರ್ಯವಾಗಿದೆ. ಎಲ್ಲರ ಸಹಕಾರವೂ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಬೆಳಿಗ್ಗೆ 9:30ಕ್ಕೆ ಶಿರ್ವ ಕೆನರಾ ಬ್ಯಾಂಕ್, ವೃತ್ತದಿಂದ ಆರಂಭವಾಗಿ ಶಿರ್ವ ಪೇಟೆ ಮೂಲಕ ಪೆರ್ನಾಲ್ ವರೆಗೆ ಕಾಲ್ನಾಡಿಗೆ ಜಾತ ಹಮ್ಮಿಕೊಳ್ಳಲಾಯಿತು. ಈ ಜಾಥವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಮುದಾಯದ ಯುವ ಪ್ರತಿಭೆಗಳಿಂದ ಡೋಲು ವಾದನ, ಡೋಲು ಕುಣಿತ, ಹಾಡು ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಇದರ ಉಪಾಧ್ಯಕ್ಷರಾದ ಐತಪ್ಪ ವರ್ಕಾಡಿ, ಪೆರ್ನಾಲಿನ ಸಮಗ್ರ ಗ್ರಾಮೀಣ ಅಭಿವೃದ್ಧಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಹಾಗೂ ಕೊರಗ ಸಮುದಸಯದ ಮುಖಂಡರು, ಸಮುದಾಯದ ಬಾಂಧವರು ಉಪಸ್ಥಿತರಿದ್ದರು