Ad

ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿ

ನಗರದ ತಾಯಿ ಮಕ್ಕಳ ಆಸ್ಪತ್ರೆಯ ಬಳಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚಕರು ಮಹಿಳೆಯೊಬ್ಬರ 1.50 ಲಕ್ಷ ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.

ಶಿರಾ : ನಗರದ ತಾಯಿ ಮಕ್ಕಳ ಆಸ್ಪತ್ರೆಯ ಬಳಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚಕರು ಮಹಿಳೆಯೊಬ್ಬರ 1.50 ಲಕ್ಷ ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.

Ad
300x250 2

ತಾಲ್ಲೂಕಿನ ಕಡವಿಗೆರೆ ಗ್ರಾಮದ ಅಶ್ವಥಮ್ಮ ಆಸ್ಪತ್ರೆಗೆ ಬಂದಿದ್ದರು. ತಾಯಿ ಮತ್ತು ಮಗು ಆಸ್ಪತ್ರೆಯ ಮುಂದೆ ಹೋಗುತ್ತಿದ್ದಾಗ ಪೊಲೀಸರು ಎಂದು ಹೇಳಿಕೊಂಡ ಇಬ್ಬರು ಅಪರಿಚಿತರು ಮುಂದೆ ಗಲಾಟೆ ನಡೆಯುತ್ತಿದೆ. ಅಶ್ವಥಮ್ಮ ಅವರ ಬಂಗಾರದ ಸರ, ಬಿಚ್ಚಿಸಿ ಪೇಪರ್ ಕವರ್‌ನಲ್ಲಿ ಹಾಕುವಂತೆ ತಿಳಿಸಿದ್ದರು. ಬಳಿಕ ಆ ಕವರನ್ನು ಅಶ್ವಥಮ್ಮ ಅವರ ಬ್ಯಾಗ್‌ನಲ್ಲಿರಿಸಿದ್ದರು.

ಅಲ್ಲಿಂದ ಸ್ವಲ್ಪ ದೂರ ತೆರಳಿದ್ದ ಅಶ್ವಥಮ್ಮ ಅವರು ಬ್ಯಾಗ್‌ನಲ್ಲಿದ್ದ ಪೇಪರ್ ಕವರ್ ತೆಗೆದಾಗ ಆಘಾತ ಕಾದಿತ್ತು. ಪೇಪರ್ ಕವರ್‌ನಲ್ಲಿ ಚಿನ್ನದ ಮಾಂಗಲ್ಯಸರ ಇರಲಿಲ್ಲ. ತಾಯಿ ಮಕ್ಕಳ ಆಸ್ಪತ್ರೆಯ ಬಳಿ ಬಂದಾಗ ವಂಚಕರು ಜಾಗ ಖಾಲಿ ಮಾಡಿದ್ದರು. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad