Ad

ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿ ಹುಚ್ಚಾಟ ಮೆರೆದ ಭೂಪ

ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಏರಿ ಹುಚ್ಚಾಟ ಮೆರೆದಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಲಕ್ಕುವನಹಳ್ಳಿ ಗ್ರಾಮದ ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತುಮಕೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಏರಿ ಹುಚ್ಚಾಟ ಮೆರೆದಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಲಕ್ಕುವನಹಳ್ಳಿ ಗ್ರಾಮದ ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Ad
300x250 2

ತಿಪಟೂರು ತಾಲ್ಲೋಕಿನ ಹೊನವಳ್ಳಿ ಹೋಬಳಿ ಸಾರ್ಥವಳ್ಳಿ ಮತ್ತು ನೆಲಗೊಂಡನಹಳ್ಳಿ ಮಧ್ಯ ರಸ್ತೆ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ ಪರ್ಮರ್ ಕಂಬಕ್ಕೆ ಬಸವರಾಜ್ ಎಂಬಾತ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬವನ್ನು ಏರಿ ಟ್ರಾನ್ಸ್ ಪರ್ಮರ್ ಗೆ ತಬ್ಬಿಕೊಂಡು ಸಾಯಲು ಪ್ರಯತ್ನಿಸಿದ್ದಾನೆ.

ಬಸವರಾಜು ಹುಚ್ಚಾಟ ಕಂಡ ನೆಲಗೊಂಡನಹಳ್ಳಿ ಗ್ರಾಮಸ್ಥರು ಗಾಬರಿಗೊಂಡು ತಿಪಟೂರು ಬೆಸ್ಕಾಂ ಇಲಾಖೆ ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅಷ್ಟರಲ್ಲಿ ಕರೆಂಟ್ ಶಾಕ್ ಹೊಡೆದಿದೆ.

ಮಾಹಿತಿ ಬಂದ ತಕ್ಷಣ ಬೆಸ್ಕಾಂ ಸಿಬ್ಬಂದಿ ಕರೆಂಟ್ ಲೈನ್ ತೆಗೆದ ಕಾರಣ ಭಾರೀ ಅಪಾಯ ತಪ್ಪಿದ್ದು ಬಸವರಾಜ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಂಬುಲೆನ್ಸ್ ಮೂಲಕ ಗಾಯಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ. ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸ್ ಹಾಗೂ ಬೆಸ್ಕಾಂ ಸಿಬ್ಬಂದಿ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad