Bengaluru 23°C
Ad

ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳ ದಾಳಿ

ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಗರಸಭೆಯ 12ನೇ ವಾರ್ಡ್ ವ್ಯಾಪ್ತಿಯಲ್ಲಿ  ನಡೆದಿದೆ.

ಶಿರಾ: ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಗರಸಭೆಯ 12ನೇ ವಾರ್ಡ್ ವ್ಯಾಪ್ತಿಯಲ್ಲಿ  ನಡೆದಿದೆ.

ಬೀದಿನಾಯಿಗಳು ದಾಳಿ ನಡೆಸಿ, ನಾಲ್ಕು ಮಕ್ಕಳು ಹಾಗೂ ಮಕ್ಕಳ ರಕ್ಷಣೆಗೆಂದು ಹೋದ ಮಹಿಳೆಯ ಮೇಲೂ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ.

ರಿಹಾನ್ (7), ತಾಸ್ಮಿಯ (13), ಜಿಯಾ ಉಲ್ಲಾಖಾನ್ (7), ಇಬದುಲ್ಲಾ ಖಾನ್ (1) ಹಾಗೂ ಶಾಹಿನ (45) ಅವರಿಗೆ ಗಾಯಗಳಾಗಿದ್ದು, ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ 4 ಮಕ್ಕಳು ಹಾಗೂ ಮಹಿಳೆಯನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶಿರಾ ನಗರಸಭೆ ವ್ಯಾಪ್ತಿಯ 12ನೇ ವಾರ್ಡ್‌ನ ನಿವಾಸಿಗಳು, ನಗರಸಭೆಯ ಆಯುಕ್ತ ಕೆ. ರುದ್ರೇಶ್‌ ಅವರಿಗೆ ಮನವಿ ಸಲ್ಲಿಸಿದರು.

Ad
Ad
Nk Channel Final 21 09 2023
Ad