Ad

ತುಮಕೂರು; ಸ್ಪ್ರೈಟ್ ಕೂಲ್ ಡ್ರಿಂಕ್‌ನಲ್ಲಿ ಹುಳ ಪತ್ತೆ

Tumkur

ತುಮಕೂರು: ನಗರದ ಎಂ.ಜಿ ರಸ್ತೆಯ ಭಾರತಿ ಟೀ ಶಾಪ್‌ನಲ್ಲಿ ಕೋಕಾಕೋಲಾ ಕಂಪನಿಯ ಉತ್ಪನ್ನವಾಗಿರುವ ಸ್ಪ್ರೈಟ್ ಕೂಲ್ ಡ್ರಿಂಕ್‌ನಲ್ಲಿ ಹುಳ ಪತ್ತೆಯಾಗಿದೆ. ಸ್ಪ್ರೈಟ್(Sprite) ಕೂಲ್ ಡ್ರಿಂಕ್‌ನಲ್ಲಿ ಜೇಡ ರೂಪದ ಹುಳ ಪತ್ತೆಯಾಗಿರುವುದು ಕೂಲ್ ಡ್ರಿಂಕ್ಸ್ ಪ್ರಿಯರನ್ನು ಬೆಚ್ಚಿಬಿಳಿಸಿದೆ.

Ad
300x250 2

ಗ್ರಾಹಕ ರಕ್ಷಿತ್ ಎಂಬುವವರು ಖರೀದಿಸಿದ ಸ್ಪ್ರೈಟ್‌ನಲ್ಲಿ ಹುಳ ಪತ್ತೆಯಾಗಿತ್ತು. ರಕ್ಷಿತ್ ಆಹಾರ ಸುರಕ್ಷತಾ ಇಲಾಖೆಗೆ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಟೀ ಶಾಪ್‌ನಲ್ಲಿ ಪರಿಶೀಲನೆ ನಡೆಸಿದ್ದು, ಉಳಿದಿದ್ದ ಸ್ಪ್ರೈಟ್ ಬಾಟಲಿಗಳನ್ನ ವಶಕ್ಕೆ ಪಡೆದು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದಾರೆ. ಅಂಗಡಿ ಮಾಲೀಕರು, ವಿತರಕ ಹಾಗೂ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ.

Ad
Ad
Nk Channel Final 21 09 2023
Ad