Bengaluru 27°C
Ad

ತುಮಕೂರು-ಯಶಂತಪುರ ಮಧ್ಯೆ ನೂತನ ಮೆಮು ರೈಲು ಸೇವೆಗೆ ವಿ ಸೋಮಣ್ಣ ಚಾಲನೆ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ಶುಕ್ರವಾರ ತುಮಕೂರು-ಯಶವಂತಪುರ ಮೆಮು  ರೈಲಿಗೆ ಚಾಲನೆ ನೀಡಿದರು.ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.

ತುಮಕೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ಶುಕ್ರವಾರ ತುಮಕೂರು-ಯಶವಂತಪುರ ಮೆಮು  ರೈಲಿಗೆ ಚಾಲನೆ ನೀಡಿದರು.ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.

ಮೆಮು ರೈಲು ಸಂಚಾರ: ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಇಂದೇ ಕಾರ್ಯಾರಂಭ ಮಾಡುತ್ತಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ.ರೈಲು ಸಂಖ್ಯೆ 06201: ತುಮಕೂರು-ಯಶವಂತಪುರ ಮೆಮು ರೈಲು ಪ್ರತಿದಿನ ಬೆಳಿಗ್ಗೆ 8.45ಕ್ಕೆ ತುಮಕೂರಿನಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06202: ಯಶವಂತಪುರ-ತುಮಕೂರು ಮೆಮು ರೈಲು ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು ಸಂಜೆ 7.05ಕ್ಕೆ ತುಮಕೂರು ತಲುಪಲಿದೆ.

Ad
Ad
Nk Channel Final 21 09 2023