Bengaluru 23°C
Ad

ಪ್ಲಾಸ್ಟಿಕ್‌ ಚೀಲ ಅಕ್ರಮ ಮಾರಾಟ: ನಗರಸಭೆ ಅಧಿಕಾರಿಗಳು ಗೋದಾಮು ಮೇಲೆ ದಾಳಿ

ನಗರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋದಾಮು ಮೇಲೆ ಕಳೆದ ರಾತ್ರಿ ನಗರಸಭೆ ಆಯುಕ್ತ ಮತ್ತು ಸಿಬ್ಬಂದಿ ದಿಢೀರ್‌ ದಾಳಿ ನಡೆಸಿ ಸುಮಾರು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರಾ: ನಗರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋದಾಮು ಮೇಲೆ ಕಳೆದ ರಾತ್ರಿ ನಗರಸಭೆ ಆಯುಕ್ತ ಮತ್ತು ಸಿಬ್ಬಂದಿ ದಿಢೀರ್‌ ದಾಳಿ ನಡೆಸಿ ಸುಮಾರು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಸಂತೆಪೇಟೆ ಯಲ್ಲಿ ದಲ್ಲಿ ಪ್ಲಾಸ್ಟಿಕ್‌ ಗೋದಾಮಿನಲ್ಲಿ ಅಕ್ರಮವಾಗಿ ಇಟ್ಟುಕೊಂಡು ಮಾಡುತ್ತಿದ್ದ ಎಂಬ ದೂರಿನ ಅಧಾರದ ಮೇಲೆ ನಗರಸಭೆ ಆಯುಕ್ತ ರುದ್ರೇಶ್ ಮತ್ತು ಪರಿಸರ ಇಂಜಿನಿಯರ್ ಫಲವಿ ಮತ್ತು ಸಿಬ್ಬಂದಿ ದಿಢೀರ್‌ ದಾಳಿ ನಡೆಸಿ ಸುಮಾರು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಚಿಲ್ಲರೆ ಅಂಗಡಿಗಳಿಗೆ ಈಗಾಗಲೆ ಪ್ಪಾಸ್ಟಿಕ್‌ ಸರಕಾರ ನಿಷೇಧ ಮಾಡಿರುವುದರಿಂದ ಕವರ್‌ ಬಳಸಬೇಡಿ ಎಂದು ಹಿಂದೆ ಅಧಿಕಾರಿಗಳು ಎಲ್ಲ ಚಿಲ್ಲರೆ ಅಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡುವುದರ ಅವರು ಸಹ ಅಂಗಡಿಗಳಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್‌ ಚೀಲ ಇಟ್ಟುಕೊಂಡಿದ್ದಿದನ್ನ ಅರಿತುಕೊಂಡ ನಗರಸಭೆ ಅಧಿಕಾರಿಗಳ ತಂಡ ದಾಳಿ ನಡೆಸಿ 100 ಕೆ.ಜೆ.ಯಷ್ಟು ಪ್ಲಾಸ್ಟಿಕ್‌ ಕವರ್‌ ವಶಪಡಿಸಿಕೊಂಡಿದ್ದಾರೆ.

ವ್ಯಾಪಾರಿಗಳು ಗೋದಾಮಿನಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್‌ ಚೀಲವನ್ನು ಮತ್ತೆ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿದ ಸಂದರ್ಭಲ್ಲಿ ಮತ್ತೆ ಪ್ಲಾಸ್ಟಿಕ್‌ ಚೀಲ ಪತ್ತೆಯಾದ್ದರಿಂದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ದ (1)

ಸರಕಾರದ ಆದೇಶಗಳನ್ನು ಸಾರ್ವಜನಿಕರು ಮತ್ತು ಅಂಗಡಿ ಮುಗ್ಗಟ್ಟು ವ್ಯಾಪಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಗರದಲ್ಲಿ ಪ್ಲಾಸ್ಟಿಕ್‌ ಮುಕ್ತ ನಗರವಾಗಿ ಮಾಡಬೇಕೆಂದು ಅಂಗಡಿ ಮಾಲೀಕರಿಗೆ ಸೂಚಿಸಿದರು.

ನಂತರ ನಗರಸಭೆ ಆಯುಕ್ತ ರುದ್ರೇಶ್ ಮಾತನಾಡಿ, ಪಟ್ಟಣ ನಗರ ವ್ಯಾಪ್ತಿಗೆ ಬರುವ ಎಲ್ಲ ಅಂಗಡಿ ವ್ಯಾಪಾರಿಗಳಿಗೆ, ಹೋಟೆಲ್‌ ಮಾಲೀಕರಿಗೆ, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಜವಳಿ ಅಂಗಡಿ ಮಾಲೀಕರಿಗೂ ಕೂಡಾ ಪ್ಲಾಸ್ಟಿಕ್‌ ಕವರ್‌ ಬಳಸದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.

ಈಗಾಗಲೇ ನಗರಸಭೆ ವತಿಯಿಂದ ಹಲವಾರು ಬಾರಿ ಪಟ್ಟಣದ ವ್ಯಾಪಾರಿಗಳಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡುವುದರ ಜತೆಯಲ್ಲಿ ದ್ವನಿವರ್ಧಕಗಳಲ್ಲಿ ಪ್ರಚಾರ ಕೂಡ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ವ್ಯಾಪಾರಿಗಳಿಗೆ ಕಾನೂನು ಅರಿವು ಬಗ್ಗೆ ಮಾಹಿತಿ ನ್ಯಾಯಾಲಯದ ವತಿಯಿಂದ ಕೊಡಿಸಲಾಗುವುದು ಎಂದು ತಿಳಿಸಿದರು.

ಯಾರೇ ಆದರೂ ಅಕ್ರಮವಾಗಿ ಪ್ಲಾಸ್ಟಿಕ್‌ ಚೀಲ ಮತ್ತು ಕವರ್‌ ಮಾರಟ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜತೆಯಲ್ಲಿ ಅವರ ಅಂಗಡಿ ಪರವಾನಗೆ ರದ್ದುಪಡಿಸಲಾಗವುದು ಮತ್ತು ಅವರಿಗೆ ನ್ಯಾಯಾಲಯದ ಮುಖಾಂತರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

 

Ad
Ad
Nk Channel Final 21 09 2023
Ad