ತುಮಕೂರು: ಜಾತಿ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಅರ್ಚಕರೊಬ್ಬರನ್ನು ಬಂಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕುಣಿಗಲ್ ನ ಬೆಟ್ಟದ ರಂಗಸ್ವಾಮಿ ದೇವಸ್ಥಾನದ ಹುಂಡಿ ಮುಟ್ಟಿದ್ದಕ್ಕೆ ದೇವಸ್ಥಾನದ ಭದ್ರತಾ ಸಿಬ್ಬಂದಿ ಪಾರ್ಥರಾಜು ಎಂಬವರನ್ನು ಅರ್ಚಕ ರಾಕೇಶ್ ಬೈದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅರ್ಚಕ ರಾಕೇಶ್ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಪಾರ್ಥರಾಜು ದೂರು ನೀಡಿದ್ದರು.
ದೂರಿನಲ್ಲಿ ಜಾತಿ ನಿಂದನೆ ಮಾಡಿದ್ದಲ್ಲದೇ ತನ್ನನ್ನು ಕೋಲಿನಿಂದ ರಾಕೇಶ್ ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕುಣಿಗಲ್ ಠಾಣೆ ಪೊಲೀಸರು ಅರ್ಚಕ ರಾಕೇಶ್ ನನ್ನು ಬಂಧಿಸಿದ್ದಾರೆ.
Ad