ಕೇರಳ: ಇಲ್ಲಿನ ನಟೋರಿಯಸ್ ಕ್ರಿಮಿನಲ್ ವಿರುದ್ದದ ಲವ್ ಜಿಹಾದ್ ಆರೋಪ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ಮಗಳು ಮನೆಬಿಟ್ಟು ಹೋಗಿದ್ದು, ಕೇರಳ ಹೈಕೋರ್ಟ್ ಆದೇಶದಂತೆ ಮೊಹಮ್ಮದ್ ಅಶ್ಫಾಕ್ ವಿಸ್ಮಯಳನ್ನು ಮದುವೆಯಾಗಿದ್ದಾನೆ. ವಿಸ್ಮಯ ತಂದೆಯ ಬಳಿ ಕ್ಷಮೆ ಕೋರಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಪೋಸ್ಟ್ ಹಾಕಿದ್ದಾರೆ.
ಮಗಳನ್ನು ಉಳಿಸಿಕೊಡಿ ಅಂತ ವಿಎಚ್ ಪಿ ಮುಖಂಡರ ಬಳಿಗೆ ವಿಸ್ಮಯ ತಂದೆ ವಿನೋದ್ ಬಂದಿದ್ದರು. ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಾಸ್ ತರಿಸೋ ಭರವಸೆಯನ್ನು ವಿಎಚ್ ಪಿ ನೀಡಿದ್ದರು. ವಿಸ್ಮಯಳನ್ನ ಮಂಗಳೂರಿನ ಕೌನ್ಸೆಲಿಂಗ್ ಸೆಂಟರ್ ಗೆ ವಿಎಚ್ ಪಿ ಹಾಕಿದ್ದರು.
ಆದರೆ ಕೇರಳ ಹೈಕೋರ್ಟ್ ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿ ವಿಸ್ಮಯಳನ್ನ ಮತ್ತೆ ಅಶ್ಫಾಕ್ ವರಿಸಿದ್ದನು. ಕೇರಳ ಹೈಕೋರ್ಟ್ ಆದೇಶದಂತೆ ಅಶ್ಫಾಕ್ ಜೊತೆ ತೆರಳಿ ವಿಸ್ಮಯ ವಿವಾಹವಾದರು. ಗಡಿನಾಡ ಹಿಂದೂ ಯುವತಿಯನ್ನ ಇಸ್ಲಾಂಗೆ ಮತಾಂತರಿಸಿ ವಿವಾಹವಾದರು. ಕ್ರಿಮಿನಲ್ ರೆಕಾರ್ಡ್ ಹೊಂದಿರೋ ಅಶ್ಫಾಕ್ ನಿಂದ ವಿಸ್ಮಯಳನ್ನು ಎರಡು ತಿಂಗಳ ಪರಿಚಯದಲ್ಲೇ ಮೈಂಡ್ ವಾಶ್ ಮಾಡಿರುವ ಆರೋಪವಿದೆ.
ಅಶ್ಫಾಕ್ ಗಡಿನಾಡ ಹಿಂದೂ ಹುಡುಗಿಯನ್ನ ಮಂಗಳೂರಿನಿಂದ ಅಪಹರಿಸಿದ್ದನು. ಕಾಸರಗೋಡಿನ ವಿಸ್ಮಯ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ವಿಸ್ಮಯ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿಯಾಗಿದ್ದಾಳೆ. ಅಶ್ಫಾಕ್ ವಿದ್ಯಾ ನಗರದಲ್ಲಿದ್ದಾಗಲೇ ವಿಸ್ಮಯಳನ್ನ ಪ್ರೀತಿಯ ಬಲೆಗೆ ಬೀಳಿಸಿದ್ದನು.
ವಿಸ್ಮಯ ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದಳು. ಕಳೆದ ಜೂ.6 ರಂದು ಅಶ್ಫಾಕ್ ಉಳ್ಳಾಲದಿಂದ ವಿಸ್ಮಯಳನ್ನು ಕರೆದುಕೊಂಡು ಹೋಗಿದ್ದನು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ.30ರಂದು ವಿಸ್ಮಯಳನ್ನು ಅಪಹರಿಸಿ ಉಳ್ಳಾಲದಿಂದ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.
ಈ ಬಗ್ಗೆ ವಿಸ್ಮಯ ತಂದೆ ವಿನೋದ್ ರಿಂದ ಉಳ್ಳಾಲ ಠಾಣೆಗೆ ಅಪಹರಣ ದೂರು ನೀಡಿದ್ದರು. ಬಳಿಕ ವಿಸ್ಮಯಳನ್ನು ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿದ್ದರು. ಆದರೆ ಅಶ್ಫಾಕ್ ಜೊತೆಗೆ ತೆರಳೋದಾಗಿ ವಿಸ್ಮಯ ಹೇಳುತ್ತಿದ್ದಳು.
ಅಶ್ಫಾಕ್ ವಿರುದ್ದ ವಿಸ್ಮಯ ತಂದೆ ದೂರು ನೀಡಿದ್ದರು. ವಿಸ್ಮಯ ತಂದೆ ಕೇರಳದಲ್ಲಿ ಮತಾಂತರಕ್ಕೆ ಯತ್ನಿಸಿರೋ ಆರೋಪವನ್ನು ಮಾಡಿದ್ದರು. ಬಳಿಕ ಮಂಗಳೂರಿನ ವಿಎಚ್ ಪಿ ನಾಯಕರ ಭೇಟಿಯಾಗಿ ವಿಸ್ಮಯ ತಂದೆ ಮಗಳನ್ನ ಉಳಿಸಿಕೊಡಿ ಅಂತ ಕಣ್ಣೀರು ಹಾಕಿದ್ದರು. ಆದರೆ ಕೊನೆಗೂ ತಂದೆ ವಿನೋದ್ ಗೆ ಸಿಗದೇ ವಿಸ್ಮಯಳನ್ನು ಅಶ್ಫಾಕ್ ನ ವರಿಸಿದ್ದಾನೆ.