ಹಾಸನ: ಪ್ರಕೃತಿ ವಿಕೋಪ, ಗಂಡಾಂತರಗಳ ಬಗ್ಗೆ ಈ ಹಿಂದೆ ಭವಿಷ್ಯ ನುಡಿದ್ದ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದ ಶಿವಾನಂದ ಶಿವಯೋಯೋಗಿ ರಾಜೇಂದ್ರ ಶ್ರೀಗಳು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಆಕಾಶದಿಂದ ಆಪತ್ತು ಕಾದಿದೆ ಎಂದು ಹೇಳಿದ್ದಾರೆ. ಪಂಚ ಭೂತಗಳಿಂದಲೂ ದೇಶಕ್ಕೆ ತೊಂದರೆ ಇದೆ. ಆದರೆ ಆಗಸದಿಂದ ಅಪಾಯ ಸಂಭವಿಸಲಿದೆ ಎಂದು ಹೇಳಿದ್ದಾರೆ.
ಕೋಡಿಮಠದಲ್ಲಿ ಮಾತನಾಡಿದ ಸ್ವಾಮೀಜಿ, ಈ ವರ್ಷ ಮಳೆಯಿಂದ ದೇಶದಲ್ಲಿ ತೊಂದರೆ ಸಂಭವಿಸಲಿದೆ ಎಂದು ಹೇಳಿದ್ದೆ. ಇನ್ನೂ ಕೂಡ ಮಳೆ ಮುಂದುವರೆಯಲಿದೆ. ನಮಗೆ ಪಂಚ ಶಕ್ತಿಗಳಿಂದಲೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಸೇರಿದಂತೆ ಎಲ್ಲಾ ಕಡೆ ತೊಂದರೆಯಾಗುತ್ತದೆ. ಆಕಾಶದಿಂದ ಸಮಸ್ಯೆ ಎದುರಾಗಲಿದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ. ಇನ್ನು ಗುಡ್ಡ ಕುಸಿಯಲಿದೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುಳುಗುತ್ತವೆ ಎಂದು ಹೇಳಿದ್ದೆ. ಮಳೆ ಇನ್ನೂ ಇದೆ. ಇನ್ನೂ ಅನಾಹುತಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾರೆ.