Bengaluru 29°C
Ad

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ: ಈಶ್ವರಪ್ಪ

ಮತದಾನೋತ್ತರ ಸಮೀಕ್ಷೆಗಳ ಮೂಲಕ ಜನರ ಭಾವನೆಗಳು ಹೊರಬಿದ್ದಿದ್ದು, ಭಾರತೀಯರ ಹೃದಯ ಗೆದ್ದಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ: ಮತದಾನೋತ್ತರ ಸಮೀಕ್ಷೆಗಳ ಮೂಲಕ ಜನರ ಭಾವನೆಗಳು ಹೊರಬಿದ್ದಿದ್ದು, ಭಾರತೀಯರ ಹೃದಯ ಗೆದ್ದಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಇಂಡಿಯಾ ಮೈತ್ರಿಕೂಟದವರು ನಾಳೆ ಮಧ್ಯಾಹ್ನದವರೆಗೆ ತಾವೇ ಅಧಿಕಾರಕ್ಕೆ ಬರೋದು ಅಂತ ಹೇಳುತ್ತಾರೆ. ಫಲಿತಾಂಶಗಳು ಹೊರಬಿದ್ದ ಮೇಲೆ ಈವಿಎಂಗಳ ಟ್ಯಾಂಪರಿಂಗ್ ನಡೆದಿದೆ, ನರೇಂದ್ರ ಮೋದಿಯವರು ಪುನಃ ಪ್ರಧಾನಮಂತ್ರಿಯಾಗುತ್ತಿರುವುದು ಆಕಸ್ಮಿಕವೆಂದು ಹೇಳುತ್ತಾರೆ. ಲೋಕಸಭಾ ಚುನಾವಣೆ ಫಲಿತಾಂಶಗಳ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದರು.

Ad
Ad
Nk Channel Final 21 09 2023
Ad