Bengaluru 28°C
Ad

ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದ ಬಂಗಾರಪ್ಪ

ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದಾರೆ.

ಶಿವಮೊಗ್ಗ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದಾರೆ.

ಬಂಗಾರಪ್ಪ ಹಾಗೂ ರಾಜ್ ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದೆ ಸೋಲಿಗೆ ಕಾರಣ. ನಟ ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಪಡುವುದು ಬೇಕಿಲ್ಲ.

ದೊಡ್ಮನೆ ವ್ಯವಹಾರ ಸಾಕಷ್ಟಿದೆ, ಅದು ಬೇರೆಯವರಿಗೆ ಅವಕಾಶ ಸಿಗಲ್ಲ. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ತಮ್ಮ ಪಟಾಲಂ ಮುಂದೆ ಮಾತ್ರ ಇರಲಿ.

ದಿಕ್ಕು ಗೆಟ್ಟು ದಿಕ್ಕಾ ಪಾಲಾಗಿ ಬೆಂಗಳೂರು ಸೇರಿದವರಿಗೆ ಇದು ಕೊನೆಯ ಎಚ್ಚರಿಕೆ. ನೀವು ಹಿಂತುಗಿರುಗಿ ಬರುವುದು ನಿಮ್ಮ ಕನಸಿನ ಮಾತು. ಹೋಗಿ ಬನ್ನಿ ಟಾಟಾ ಬೈ ಬೈ ಎಂದು ತಿರುಗೇಟು ನೀಡಿದ್ದಾರೆ.

Ad
Ad
Nk Channel Final 21 09 2023
Ad