Bengaluru 30°C

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆಯಲಿದೆ ಕರಾವಳಿ ಜಾನಪದ ಕ್ರೀಡೆ “ಕಂಬಳ”

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಜಾನಪದ ರೈತ ಕ್ರೀಡೆಯಾದ ಕಂಬಳ ತನ್ನ ಕಂಪನ್ನು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಿನಾಂಕ 19-04-2025 ಶನಿವಾರ ಮತ್ತು 20-04-2025ರ ಭಾನುವಾರದಂದು ಮಾಚೇನಹಳ್ಳಿ, ಶಿವಮೊಗ್ಗ (ತಾ), ಶಿವಮೊಗ್ಗ (ಜಿ)ಯಲ್ಲಿ ಕಂಪಿಸಲಿದೆ.

 ಶಿವಮೊಗ್ಗ:  ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಜಾನಪದ ರೈತ ಕ್ರೀಡೆಯಾದ ಕಂಬಳ ತನ್ನ ಕಂಪನ್ನು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಿನಾಂಕ 19-04-2025 ಶನಿವಾರ ಮತ್ತು 20-04-2025ರ ಭಾನುವಾರದಂದು ಮಾಚೇನಹಳ್ಳಿ, ಶಿವಮೊಗ್ಗ (ತಾ), ಶಿವಮೊಗ್ಗ (ಜಿ)ಯಲ್ಲಿ ಕಂಪಿಸಲಿದೆ.

ಕರಾವಳಿ ಕರ್ನಾಟಕ ಜಾನಪದ, ಕ್ರೀಡೆಯನ್ನು ವಿಶ್ವ ಪಾರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಶ್ರೀಮತಿ ಕಲ್ಪನ ಸಂತೋಷ, ಕೆ. ಎಸ್‌. ನಾಗಪಾತ್ರಿಗಳು, ಶ್ರೀ ನಾಗಯಕ್ಷೆ ದೇವಸ್ಥಾನ, ಹೆಗಲತ್ತಿ, ತೀರ್ಥಹಳ್ಳಿ (ತಾ) ಇವರು ಯೋಜಿಸಿದ್ದು, ಇಂತಹ ಜನಪ್ರಿಯ ಜಾತ್ಯಾತೀತ ರೈತ ಕ್ರೀಡೆಯನ್ನು ಜೋಗದ ಸಿರಿಯಲ್ಲಿ ಮೊಳಗಿ ಕೊಡಚಾದ್ರಿ ಶಿಖರದಿ ಹೊಮ್ಮಲು ಶಿವಮೊಗ್ಗ ನಗರದ ಅಭಿವೃದ್ಧಿ ಯೋಜನೆಯ ರುವಾರಿ 7 ಬಾರಿ ಶಾಸಕರಾಗಿ, ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಹಲವು ಇಲಾಖೆಗಳ ಸಚಿವರಾಗಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಮತ್ತು ಸಾಂ ಸ್ಕೃತಿಕ ರಾಯಭಾರಿಯು ಹಾಗೂ ನಂದನ ಮತ್ತು ಫೇಸ್‌ ವಿದ್ಯಾಸಂಸ್ಥೆಯ ಅಧ್ಯಕ್ಷರು ಆಗಿರುವ ಶ್ರೀ ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್‌ “ಮಲೆನಾಡ ಕಂಬಳ” ವನ್ನು ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಬಾಗಿತ್ವದಲ್ಲಿ ಹಚ್ಚ ಹಸಿರ ಪಶ್ಚಿಮ ಘಟ್ಟಗಳ ದ್ದಾರ ಶಿವಮೊಗ್ಗ ತುಂಗೆಯ ತಟದಲ್ಲಿ “ಮಲೆನಾಡ ಕ೦ಬಳ”ವನ್ನು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಹಾಗೂ ರೋಟರಿ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್‌ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ ಜನಪ್ರತಿನಿಧಿಗಳನ್ನು, ಸರ್ವಧರ್ಮೀಯರನ್ನು ಹಾಗೂ ಎಲ್ಲಾ ಕಂಬಳ ಅಭಿಮಾನಿಗಳನ್ನು ಒಗ್ಗೂಡಿಸಿ “ಮಲೆನಾಡ ತುಂಗ-ಭದ್ರ ಜೋಡುಕರೆ ಕಂಬಳ”ವನ್ನು ಆಯೋಜಿಸಲು ತೀರ್ಮಾನಿಸಿರುತ್ತೇವೆ.


ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಜನಪದವನ್ನು ಸದಾ ಸಾರುವ ಮಲೆನಾಡು ಇಂದು ಕೃಷಿ ಸಂತುಸ್ಟಿಗಾಗಿ ಮತ್ತು ಸ್ಥಳೀಯ ಪರಂಪರೆಯ ಪಸರಣಕ್ಕೆ ಇದು ಸಾಕ್ಷಿಯಾಗಲಿದೆ.


Nk Channel Final 21 09 2023