Ad

ಭದ್ರಾ ಡ್ಯಾಂ ಸೋರಿಕೆ : ಉನ್ನತ ಮಟ್ಟದ ತನಿಖೆಗೆ ಸ್ಥಳೀಯರಿಂದ ಆಗ್ರಹ

ರಾಜ್ಯದ ಹಲವು ಭಾಗಗಳಲ್ಲಿ  ಭಾರೀ ಮಳೆಯಾಗುತ್ತಿದ್ದು, ಮಲೆನಾಡಿನ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟು ಮಾತ್ರ ತುಂಬಿದ್ದರೂ ನೀರು ಸೋರಿಕೆಯಾಗುತ್ತಿದೆ.

ಶಿವಮೊಗ್ಗ: ರಾಜ್ಯದ ಹಲವು ಭಾಗಗಳಲ್ಲಿ  ಭಾರೀ ಮಳೆಯಾಗುತ್ತಿದ್ದು, ಮಲೆನಾಡಿನ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟು ಮಾತ್ರ ತುಂಬಿದ್ದರೂ ನೀರು ಸೋರಿಕೆಯಾಗುತ್ತಿದೆ.

Ad
300x250 2

ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಲಾಶಯದ ನೀರು ಪೋಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸರ್ಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಜಿಲ್ಲೆಯ ರೈತರು, ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಭದ್ರಾ ಜಲಾಶಯದ ಸ್ಲೂಯಿಸ್ ಗೇಟ್​ನಿಂದ ಸಾವಿರಾರು ಕ್ಯೂಸೆಕ್ ನೀರು ನಿರಂತರವಾಗಿ ಹರಿದು ಹೋಗುತ್ತಿವೆ. ಆದರೆ ನೀರನ್ನು ಸೋರಿಕೆಯಾಗದಂತೆ ತಡೆಗಟ್ಟಲು ಅಧಿಕಾರಿಗಳು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ನೀರಿನ ಸೋರಿಕೆ ತಡೆಗಟ್ಟಲು ಮರದ ದಿಮ್ಮಿ, ಸೊಪ್ಪು ಬಳಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಸೋರಿಕೆ ತಡೆಗೆ ಡ್ಯಾಂನ ನಿವೃತ್ತ ಮೆಕ್ಯಾನಿಕ್ ವರದಯ್ಯನ ಅಧಿಕಾರಿಗಳು ಮೊರೆ ಹೋಗಿದ್ದಾರೆ.

ಸೋರಿಕೆಯಾಗುತ್ತಿರೋ ಭದ್ರಾ ಡ್ಯಾಂ ಮಧ್ಯ ಕರ್ನಾಟಕ ಭಾಗದಲ್ಲಿನ ರೈತರ ಜೀವನಾಡಿಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭದ್ರಾ ಡ್ಯಾಂ ಬರಿದಾಗುವ ಆತಂಕ ವ್ಯಕ್ತವಾಗುತ್ತಿದೆ. ಸೋರಿಕೆ ನಿಲ್ಲದಿದ್ದರೆ 5-6 ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ.

 

 

Ad
Ad
Nk Channel Final 21 09 2023
Ad