Bengaluru 28°C

ಶಿರೂರು ಗುಡ್ಡ ಕುಸಿತ: ಈಶ್ವರ್​ ಮಲ್ಪೆಗೆ ನದಿಯಲ್ಲಿ ಪತ್ತೆಯಾದ ಸಾಮಾಗ್ರಿ ಅರ್ಜುನ್​ ಲಾರಿಯದ್ದಾ?

ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು.

ಶಿರೂರು: ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು.


ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ​​ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.


ಶುಕ್ರವಾರದಂದು ಈಶ್ವರ್​ ಮಲ್ಪೆ ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿಯೊಂದನ್ನು ಪತ್ತೆಹಚ್ಚಿ ತೆಗೆದುಕೊಂಡು ದಡಕ್ಕೆ ಬಂದಿದ್ದರು. ಆದರೀಗ ಈ ಸಾಮಾಗ್ರಿ​ ಅರ್ಜುನ್​ ಲಾರಿಯದ್ದಲ್ಲ ಎಂಬ ಸತ್ಯ ಹೊರಬಿದ್ದಿದೆ. ಲಾರಿ ಮಾಲೀಕ ಇದು ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ.


ಲಾರಿ ಸಾಮಾಗ್ರಿ​ ಪತ್ತೆಯಾದಾಗಿನಿಂದ ಸ್ಥಳೀಯರಿಗೆ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ನೀರಿನಡಿಯಲ್ಲಿ ಮತ್ತೊಂದು ಲಾರಿ ಇದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನು ಶಿರೂರು ಗುಡ್ಡ ಕುಸಿತದಲ್ಲಿ 3 ಗ್ಯಾಸ್​​ ಟ್ಯಾಂಕರ್​ ನದಿ ಪಾಲಾಗಿತ್ತು. ಆ ಮೂರರಲ್ಲಿ ಒಂದು ಲಾರಿಯ ಸಾಮಾಗ್ರಿ​ ಇದಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಈ ಸಾಮಾಗ್ರಿ​ ಹಲವು ಅನುಮಾನಗಳಿಗೆ ಕಾರಣವಾಗಿದೆ.


Nk Channel Final 21 09 2023