ಕರ್ನಾಟಕದ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ತುಮಕೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ.
ಕಾರವಾರ, ಹಳಿಯಾಳ, ಮಧುಗಿರಿ, ಶಿರಾಲಿ, ಸೇಡಬಾಳ, ಕೋಟ, ಉಡುಪಿ, ನಿಪ್ಪಾಣಿ, ಸೈದಾಪುರ, ಸಂಕೇಶ್ವರ, ಧಾರವಾಡ, ರಾಯಭಾಗ, ಚಿಕ್ಕೋಡಿ, ಕೊಪ್ಪ, ಕುಂದಾಪುರ, ಮಂಕಿ, ಗೋಕರ್ಣ, ಝಲ್ಕಿ, ಔರಾದ್, ಕುಕನೂರು, ನರಗುಂದ, ಇಳಕಲ್ನಲ್ಲಿ ಮಳೆಯಾಗಿದೆ.
ರಬಕವಿ, ಹಿಡಕಲ್, ಹುಕ್ಕೇರಿ, ಹೊನ್ನಾವರ, ಅಂಕೋಲಾ, ಕಲಘಟಗಿ, ಬೆಳಗಾವಿ, ಶಿರಹಟ್ಟಿ, ನೆಲೋಗಿ, ಮಹಾಲಿಂಗಪುರ, ಮುಂಡಗೋಡು, ಮಂಗಳೂರು, ಜೇವರ್ಗಿ, ಮೂಲ್ಕಿ, ಸಿಂದಗಿ, ಆಲಮಟ್ಟಿ, ಗದಗ, ಗಬ್ಬೂರು, ಹುಂಚದಕಟ್ಟೆ, ಕಳಸ, ಕೆಆರ್ನಗರ, ಕೊಟ್ಟಿಗೆಹಾರದಲ್ಲಿ ಮಳೆಯಾಗಿದೆ.