Ad

ಲಿಂಗಸುಗೂರು ಮಠಕ್ಕೆ ನುಗ್ಗಿದ ದರೋಡೆಕೋರರು: 35 ಲಕ್ಷ ಮೌಲ್ಯ ಬೆಲೆ ಬಾಳುವ ವಸ್ತು ದೋಚಿ ಪರಾರಿ

ಲಿಂಗಸುಗೂರು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧಿಪತಿಗಳನ್ನು ಹೆದರಿಸಿ, ದರೋಡೆ ಮಾಡಲಾಗಿದೆ.

ರಾಯಚೂರು: ಲಿಂಗಸುಗೂರು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧಿಪತಿಗಳನ್ನು ಹೆದರಿಸಿ, ದರೋಡೆ ಮಾಡಲಾಗಿದೆ.

Ad
300x250 2

ಗುರುವಾರ ಮಧ್ಯರಾತ್ರಿ ಡಕಾಯಿತಿರ ಗ್ಯಾಂಗ್ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದಿದೆ. ಮಠದಲ್ಲಿದ್ದ ಓಬ್ಬರೇ ಇದ್ದ ಸಿದ್ದಲಿಂಗ ಸ್ವಾಮೀಜಿಯವರನ್ನು ದುಷ್ಕರ್ಮಿಗಳು ಎಬ್ಬಸಿದ್ದಾರೆ. ಬಳಿಕ ಸಿದ್ದಲಿಂಗ ಸ್ವಾಮೀಜಿಯವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ಮಠದಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನ ಹಾಗೂ 7 ಕೆಜಿ ಬೆಳ್ಳಿ ಆಭರಣಗಳು, ಸುಮಾರು‌ 20 ಲಕ್ಷ ನಗದು ಸೇರಿ‌ದಂತೆ 35 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್​ ಇನ್ಸ್​​ಸ್ಪೆಕ್ಟರ್​​ ಪುಂಡಲಿಕ್​ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಹರೀಶಬಾಬು, ಡಿವೈಎಸ್​ಪಿ ದತ್ತಾತ್ರೇಯ ಕಾರ್ನಾಡ್​​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Ad
Ad
Nk Channel Final 21 09 2023
Ad