ರಾಯಚೂರು: ಕಳೆದ ಜುಲೈ 28 ರಂದು ರಾಯಚೂರು ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಅದೊಂದು ಘಟನೆ ನಡೆದಿತ್ತು. ಆಶ್ರಮದಲ್ಲಿದ್ದ 10 ಕ್ಕೂ ಹೆಚ್ಚು ಮಕ್ಕಳ ಪೈಕಿ 3 ನೇ ತರಗತಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು.ಆಶ್ರಮದಲ್ಲಿದ್ದ 10 ಕ್ಕೂ ಹೆಚ್ಚು ಮಕ್ಕಳ ಪೈಕಿ 3 ನೇ ತರಗತಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅದು ಯಾವ ಪರಿ ಅಂದರೆ ಇಡೀ ಮಾನವ ಕುಲವೇ ಹಿಡಿಶಾಪ ಹಾಕೋ ರೀತಿ ಆ ಹಲ್ಲೆ ನಡೆದಿತ್ತು.
ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಚಾಲಕ@ಗುರೂಜಿಯಾಗಿದ್ದ ವೇಣುಗೋಪಾಲ್ ಎಂಬಾತ ಈ ಕೃತ್ಯ ಎಸಗಿದ್ದ. ಸೈಕೋಪಾತ್ ರೀತಿ ವರ್ತಿಸಿದ್ದ ಆರೋಪಿ ವೇಣುಗೋಪಾಲ್ ಸತತ ಮೂರು ದಿನ ಆ ಮೂರನೇ ತರಗತಿ ವಿದ್ಯಾರ್ಥಿ ಮೇಲೆ ನಿರಂತರ ಹಲ್ಲೆ ನಡೆಸಿದ್ದ. 3ನೇ ತರಗತಿ ಬಾಲಕನ ಕಣ್ಣಿಗೆ ಖಾರದ ಪುಡಿ ಹಾಕಿದ್ದ ಆರೋಪಿ, ಬಾಯಿಯಿಂದ ಬಾಲಕನ ಎಡಗೈ, ಮುಂಗೈಗೆ ಬಲವಾಗಿ ಕಚ್ಚಿ ವಿಕೃತಿ ಮೆರೆದಿದ್ದ. ಆದ್ರೆ, ದೇವರ ದಯೆಯೇ ಏನೋ ಗೊತ್ತಿಲ್ಲ, ಜುಲೈ 31 ನೇ ತಾರಿಖಿನಂದು ಹಲ್ಲೆಗೊಳಗಾಗಿದ್ದ ಬಾಲಕನ ತಾಯಿ ಮಗನ ಬಗ್ಗೆ ವಿಚಾರಿಸಲು ಅಕಸ್ಮಾತ್ ಆ ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಹೆತ್ತ ಮಗನಿಗೆ ಚಿತ್ರಹಿಂಸೆ ನೀಡಿದ್ದ ವಿಚಾರ ಬೆಳಕಿಗೆ ಬಂದಿತ್ತು.