Ad

ನೀಟ್ ಅಕ್ರಮ ಕೇಸ್‌ : ಮಕ್ಕಳ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ : ಡಾ.ಶರಣಪ್ರಕಾಶ್ ಪಾಟೀಲ್

ದೇಶದ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ಇದರಲ್ಲಿ ಬಹಳ ದೊಡ್ಡ ದೊಡ್ಡ ಜನ ಶಾಮೀಲಾಗಿದ್ದಾರೆ ಅನ್ನೋ ಶಂಕೆ ದೇಶದ ಜನರಿಗೆ ಬರುತ್ತಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದ್ದಾರೆ.

ರಾಯಚೂರು: ದೇಶದ 24 ಲಕ್ಷ ಮಕ್ಕಳು ನೀಟ್ ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ಇದರಲ್ಲಿ ಬಹಳ ದೊಡ್ಡ ದೊಡ್ಡ ಜನ ಶಾಮೀಲಾಗಿದ್ದಾರೆ ಅನ್ನೋ ಶಂಕೆ ದೇಶದ ಜನರಿಗೆ ಬರುತ್ತಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದ್ದಾರೆ.

Ad
300x250 2

ರಾಯಚೂರಿನಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ನಿಲುವು ಬಹಳ ಅನುಮಾನಾಸ್ಪದವಾಗಿದೆ. ಬಹಳ ದೊಡ್ಡ ಮಟ್ಟದ ಹಗರಣ ಆದ್ರೂ ಕೇಂದ್ರ ತನಿಖೆ ಮಾಡಿಲ್ಲ. ನೆಟ್ ಪರೀಕ್ಷೆ ಸಹ ರದ್ದಾಗಿದೆ.

ಇದನ್ನು ಸಿಬಿಐಗೆ ನೀಡಬೇಕು ಎಂಬ ಆಗ್ರಹ ಎಲ್ಲಾ ರಾಜ್ಯಗಳಲ್ಲಿ ಕೇಳಿಬರುತ್ತಿದೆ. ಆದರೂ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರ ಯಾರನ್ನು ರಕ್ಷಣೆ ಮಾಡುತ್ತಿದೆ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನೀಟ್ ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ನೀಟ್ ನಡೆಸೋದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಇದೆ. ಕೇಂದ್ರ ಸರ್ಕಾರದ ಆ್ಯಕ್ಟ್ ನಿಂದ ನೀಟ್ ಬಂದಿದೆ ಹಾಗಾಗಿ ನೀಟ್ ರದ್ದು ಮಾಡೋಕೆ ಸುಪ್ರೀಂ ಕೋರ್ಟ್ ತೀರ್ಪು ಆಗಬೇಕು.

ಬೇರೆ ರಾಜ್ಯಗಳಂತೆ ಬೇಜವಾಬ್ದಾರಿಯಿಂದ ಹೇಳುವುದಕ್ಕೆ ಆಗೋದಿಲ್ಲ. ತಮಿಳುನಾಡು ಸರ್ಕಾರ ಅದರ ಅಭಿಪ್ರಾಯ ಹೇಳಿದೆ. ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಪಾರದರ್ಶಕವಾಗಿ ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಪೇಪರ್ ಲೀಕ್ ಆಗಿದೆ ಎಂಬುದು ಎಲ್ಲಾ ಮಕ್ಕಳ ಅನುಮಾನ ಇದೆ.

ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ. ಯಾರನ್ನೂ ರಕ್ಷಣೆ ಮಾಡುವಂತಿಲ್ಲ, ನಿಮ್ಮ ತಪ್ಪು ಇದ್ದರೆ ಒಪ್ಪಿಕೊಳ್ಳಿ ಎಂದು ಸುಪ್ರೀಂ ಹೇಳಿದೆ ಅಂತ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad