ರಾಯಚೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 6 ಲಾರಿಗಳ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಸಾತ್ ಮೈಲ್ ಕ್ರಾಸ್ ಬಳಿ ನಡೆದಿದೆ. ರಾಯಚೂರು ಎಸ್ಪಿ ಎಂ.ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮರಳು ಸಹಿತ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರಿನಿಂದ ಬೀದರ್ ಕಡೆಗೆ ಹೊರಟಿದ್ದ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಅಕ್ರಮ ಮತ್ತು ನಿಯಮ ಮೀರಿ ಓವರ್ ಲೋಡ್ ಮಾಡಿ ಮರಳು ಸಾಗಾಟ ಮಾಡುತ್ತಿದ್ದ 6 ಲಾರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಿಯಮ ಮೀರಿ ಹೆಚ್ಚುವರಿ ಮರಳು ಸಾಗಿಸುತ್ತಿದ್ದಲ್ಲದೇ ಜೊತೆಗೆ ರಾಯಲ್ಪಿ ದಿನಾಂಕವನ್ನು ಸಹ ಎರಡು ದಿನ ಮುಂಗಡವಾಗಿ ಪಡೆದಿದ್ದಾರೆ. ಬೀದರ್‌ಗೆ ಅಕ್ರಮವಾಗಿ ಮರಳು ಸಾಗಿಸುವ ವೇಳೆ ಸಾತ್ ಮೈಲ್ ಬಳಿ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಕರಣ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Ad