ರಾಯಚೂರು: ಪಾದಯಾತ್ರೆ ಹೊರಟಿದ್ದ ತಾಯಿ ಮಗಳು ರಸ್ತೆ ಅಪಘಾತದಲ್ಲಿ ಬಲಿಯಾದ ಘಟನೆ ಲಿಂಗಸೂಗೂರು ತಾಲ್ಲೂಕಿನ ನಾಗಲಾಪೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅಪಘಾತದಲ್ಲಿ ತಾಯಿ ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬೆಳ್ಳಂ ಬೆಳಗ್ಗೆ ತಾಯಿ-ಮಗಳಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಭಾಗ್ಯಮ್ಮ (35) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಭಾಗ್ಯಮ್ಮ ವ್ಯಾಸ ನಂದಿಹಾಳ ಗ್ರಾಮದ ನಿವಾಸಿಯಾಗಿದ್ದು, ಭಾಗ್ಯಮ್ಮಳ ಮಗಳು ಸಾವು -ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಭಾಗ್ಯಮ್ಮ ಛತ್ತರದ ಹನುಮಾನ್ ದೇವಸ್ಥಾನಕ್ಕೆ ಇಬ್ಬರೂ ಪಾದಯಾತ್ರೆ ಹೊರಟಿದ್ದರು. ದೇವರನ್ನು ಕಾಣಲೆಂದು ಮಗಳ ಜೊತೆಗೆ ಹೋಗುತ್ತಿದ್ದರು. ಈ ವೇಳೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Ad