Ad

ರಾಯಚೂರು: ಪೆನ್ನು ಕದ್ದ ಬಾಲಕನಿಗೆ ಹಲ್ಲೆ ನಡೆಸಿದ ರಾಮಕೃಷ್ಣ ಆಶ್ರಮದ ಗುರೂಜಿ!

ಬಾಲಕನೊಬ್ಬ ಪೆನ್ನು ಕದ್ದಿದ್ದಕ್ಕೆ ಆಶ್ರಮದ ಗುರೂಜಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ.

ರಾಯಚೂರು: ಬಾಲಕನೊಬ್ಬ ಪೆನ್ನು ಕದ್ದಿದ್ದಕ್ಕೆ ಆಶ್ರಮದ ಗುರೂಜಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ.

ಬಾಲಕನನ್ನು ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಟ್ಟು ವಿದ್ಯಾರ್ಥಿಯ ಕಣ್ಣುಗಳು ಬಾವು ಬರುವಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕನಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಶ್ರವಣ ಬಡತನದ ಕಾರಣ ಆಶ್ರಮದಲ್ಲಿದ್ದನು.

ಸಹಪಾಠಿಗಳ ಜತೆ ಆಟವಾಡುತ್ತಾ ಪೆನ್ನು ಕದ್ದಿದ್ದನು. ಶ್ರವಣಕುಮಾರ್ ವಿರುದ್ಧ ಸಹಪಾಠಿಗಳು ದೂರೂ ನೀಡಿದ್ದರು. ದೂರಿನ್ವಯ ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ ಎಂಬಾತ ಶ್ರವಣಗೆ ಮನಬಂದಂತೆ ಥಳಿಸಿದ್ದಾರೆ. ಚಿಕ್ಕ ಹುಡುಗ ಎಂಬುದನ್ನು ಪರಿಗಣಿಸಿದೇ ಮೂರು ದಿನಗಳು ಕತ್ತಲೇ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರು ರಾಮಕೃಷ್ಣ ಆಶ್ರಮಕ್ಕೆ ಆಕಸ್ಮಿಕವಾಗಿ ಶ್ರವಣ ತಾಯಿ ಭೇಟಿ ನೀಡಿದಾಗ ವಿಷಯ ಬಹಿರಂಗವಾಗಿದೆ. ಸದ್ಯ ಶ್ರವಣಕುಮಾರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೈಕೈ ತುಂಬಾ ಗಾಯಗಳಾಗಿದ್ದು, ಕಣ್ಣು ಪೂರ್ತಿ ಬಾವು ಬಂದಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023