Bengaluru 22°C
Ad

ಮೈಸೂರು ಕ್ಷೇತ್ರದಿಂದ ಯದುವೀರ್​​ಗೆ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ

ಮೈಸೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದ ಯದುವೀರ್‌ ಅವರು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಸಿ ಎಂ ಸಿದ್ದರಾಮಯ್ಯ ಅವರ ತವರಾದ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕನ ಆಡಳಿತ ನಡೆಯಲಿದೆ.ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಮೈಸೂರು: ಮೈಸೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದ ಯದುವೀರ್‌ ಅವರು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಸಿ ಎಂ ಸಿದ್ದರಾಮಯ್ಯ ಅವರ ತವರಾದ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕನ ಆಡಳಿತ ನಡೆಯಲಿದೆ.ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ರಾಜವಂಶಸ್ಥನಾಗಿರು ಯದೂವೀರ್‌ ಅವರು ರಾಜಕೀಯಕ್ಕೆ ಹೆಜ್ಜೆ ಇಡುತ್ತಿದ್ದಂತೆ ಭಾರಿ ಟೀಕೆಗಳು, ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿದ್ದ ಕಾರಣ ಮೈಸೂರಿನಿಂದ ಕಾಂಗ್ರೆಸ್​ ಸ್ಥಳೀಯ ನಾಯಕ ಎಂ. ಲಕ್ಷ್ಮಣಗೆ ಅವಕಾಶ ಮಾಡಿಕೊಡಲಾಗಿತ್ತು. ಕ್ಷೇತ್ರದಲ್ಲಿ ಒಕ್ಕಲಿಗರು ಜಾಸ್ತಿ ಇದ್ದ ಕಾರಣ ಕಾಂಗ್ರೆಸ್​ ಗೆಲ್ಲಬಹುದು ಎಂದು ಭಾವಿಸಿತ್ತು. ಆದರೆ ಅದನ್ನು ಹುಸಿ ಮಾಡಿದೆ.

ಸದ್ಯ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರಿಗೆ 714906 ವೋಟ್​ಗಳು ಬಿದ್ದಿವೆ. ಎಂ. ಲಕ್ಷ್ಮಣ ಅವರು 604352 ಮತಗಳು ಪಡೆದುಕೊಂಡಿದ್ದಾರೆ. ಯದುವೀರ್​ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

Ad
Ad
Nk Channel Final 21 09 2023
Ad