Bengaluru 20°C
Ad

ಮಹಿಳೆಯರು ಸಮಯ ಪ್ರಜ್ಞೆ ಅಳವಡಿಸಿಕೊಳ್ಳುವುದು ಅಗತ್ಯ: ಡಾ.ಪುಷ್ಪ ಅಮರ್ ನಾಥ್

ವೀರರಾಣಿ ಒನಕೆ ಓಬವ್ವ ಅವರ ಸಮಯ ಪ್ರಜ್ಞೆ ಹಾಗೂ ಅವರ ಉತ್ತಮ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ಹೇಳಿದರು.

ಮೈಸೂರು: ವೀರರಾಣಿ ಒನಕೆ ಓಬವ್ವ ಅವರ ಸಮಯ ಪ್ರಜ್ಞೆ ಹಾಗೂ ಅವರ ಉತ್ತಮ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ಹೇಳಿದರು.

Ad

ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದು. ಅವರನ್ನು ಕರ್ನಾಟಕದ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದರು.

Ad

ಆಧುನಿಕ ದಿನಮಾನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದುವರೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಅವರು ಯಾವುದಕ್ಕೂ ಹೆದರದೇ ಜೀವನದಲ್ಲಿ ಧೈರ್ಯವಂತರಾಗಬೇಕು, ವೀರರಾಣಿ ಓಬವ್ವ ಅವರಂತೆ ವೀರತನವನ್ನು ಮೈಗೂಡಿಸಿಕೊಳ್ಳಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Ad

ಚಿತ್ರದುರ್ಗದ ಚರಿತ್ರೆಯಲ್ಲೇ ಇಂದು ಓಬವ್ವನ ಸಾಹಸವನ್ನು ಮೆಲುಕು ಹಾಕಿ ಸ್ಮರಿಸುವ ದಿನವಾಗಿದ್ದು, ಕತ್ತಿ ಗುರಾಣಿಗಳ ಮುಂದೆ ಕೇವಲ ಒನಕೆ ಹಿಡಿದು ತನ್ನ ಸಾಮ್ರಾಜ್ಯದ ರಕ್ಷಣೆಗೆ ಮುಂದಾದ ಸಾಮಾನ್ಯ ಹೆಣ್ಣು ಮಗಳು ಅಂದು ವೀರ ಸಾಹಸಿಯಾದಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ, ದೇಶದ ಭವಿಷ್ಯ ನಮ್ಮ ಯುವಜನತೆಯ ಕೈಯಲ್ಲಿದ್ದು, ವೀರ, ಸಾಹಸ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Ad

ವಿಧಾನ ಪರಿಷತ್ ನ ಶಾಸಕರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ, ಸಮಾಜದ ಏಳಿಗೆಗೆ ಮಹಿಳೆಯರ ಪಾತ್ರ ಮಹತ್ವವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಅಪಾರವಾದುದು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವುದು ಸ್ವಾಗತಾರ್ಹ. ತಾಯಿಗೆ ಮಿಗಿಲಾದ ವ್ಯಕ್ತಿಯಿಲ್ಲ, ಶಕ್ತಿಯೂ ಇಲ್ಲ. ಹೆಣ್ಣು ಕೇವಲ ಶಾಂತಿ, ಸಹನೆಯ ಸ್ವರೂಪವಲ್ಲ, ಅವರ ಇನ್ನೊಂದು ಮುಖ ಓಬವ್ವ, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ರಾಣಿ ಚನ್ನಮ್ಮ, ಅಬ್ಬಕ್ಕ ದೇವಿ ಮುಂತಾದ ವೀರಮಹಿಳೆಯರ ಧೈರ್ಯ-ಸಾಹಸ, ಶೌರ್ಯ, ತ್ಯಾಗ, ಬಲಿದಾನ ಗುಣಗಳನ್ನು ಹೊಂದಿರುತ್ತಾರೆ ಎಂದರು.

Ad

ವಿಶೇಷ ಉಪನ್ಯಾಸ ನೀಡಿದ ಲೇಖಕಿ ಬಿ.ಕೆ.ಮೀನಾಕ್ಷಿ, ಚಿತ್ರದುರ್ಗದ ರೋಚಕ ಚರಿತ್ರೆಯಲ್ಲಿ ಒನಕೆ ಓಬವ್ವನ ಹೆಸರು ಇಂದಿಗೂ ಚಿರಸ್ಥಾಯಿ. ಹೈದರಾಲಿಯ ಸೈನಿಕರನ್ನು ಏಕಾಂಕಿಯಾಗಿ ಹೆದರಿಸಿದ್ದು ಚರಿತ್ರೆಯಲ್ಲಿ ಎಂದೂ ಮರೆಯಲಾಗದು ಎಂದರು.

Ad

ಇಂದಿನ ಮಹಿಳೆಯರಿಗೆ ಇತಿಹಾಸದ ಬೆಳಕಿನ ಅಡಿಯಲ್ಲಿ ಬಾಳಿದಾಗ ಕತ್ತಲು ತಂತಾನೆ ದೂರವಾಗುತ್ತದೆ. ಹೆಣ್ಣು ಮಕ್ಕಳಿಗೆ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿದ್ದು, ಓಬವ್ವ ಆದರ್ಶ ಮಹಿಳೆಯಾಗಿದ್ದಾಳೆ. ಸಾಹಸ ಮೆರೆದು ಚಿತ್ರದುರ್ಗದ ಹೆಸರನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ ವೀರ ವನಿತೆ ಒನಕೆ ಓಬವ್ವರ ಜನನ, ಬಾಲ್ಯ, ವಿವಾಹ, ಇತಿಹಾಸ ಚರಿತ್ರೆಯ ಬಗ್ಗೆ ವಿಶಾಲವಾಗಿ ತಿಳಿಸಿಕೊಟ್ಟರು.

Ad

ಇದೇ ವೇಳೆ ಜಯಂತಿ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಚಂದ್ರಶೇಖರ್, ಯಮುನಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಪ್ರಸನ್ನ, ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023