Bengaluru 22°C
Ad

ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಾಪ್​​ ಟಿಕೆಟ್ ಗೆ ಅವಕಾಶ!

ಮೈಸೂರು ದಸರಾ ಮಹೋತ್ಸವ ಅಕ್ಟೋಬರ್‌ 3 ರಿಂದ ಅ.12 ರ ವರೆಗೆ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್​​ ಟಿಕೆಟ್ ನೀಡಲಾಗುತ್ತಿದೆ.

ಮೈಸೂರು: ಮೈಸೂರು ದಸರಾ ಮಹೋತ್ಸವ ಅಕ್ಟೋಬರ್‌ 3 ರಿಂದ ಅ.12 ರ ವರೆಗೆ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್​​ ಟಿಕೆಟ್ ನೀಡಲಾಗುತ್ತಿದೆ.

ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್​ನಲ್ಲೆ ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿ ಮಾಡಬಹುದು.

ವಾಟ್ಸಾಪ್​​ನಲ್ಲಿ 8884160088 ನಂಬರ್​ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಟಿಕೆಟ್ ಪಡೆಯಬಹುದು. ವಾಟ್ಸಾಪ್​​ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಖರೀದಿಸುವ ಸಮಯ ಸೇವ್ ಆಗಲಿದೆ.

 

 

Ad
Ad
Nk Channel Final 21 09 2023