Bengaluru 27°C

ಅಮೂಲ್ಯವಾದ ಜೀವ ಉಳಿಸಲು ಹೆಲ್ಮೆಟ್ ಧರಿಸಿ: ಪಿಎಸ್ಐ ಚೇತನ್ ಕುಮಾರ್

ವಾಹನ ಸವಾರರು ತಮ್ಮ ಅಮೂಲ್ಯವಾದ ಜೀವ ಉಳಿಸಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಹೇಳಿದರು.

ನಂಜನಗೂಡು: ವಾಹನ ಸವಾರರು ತಮ್ಮ ಅಮೂಲ್ಯವಾದ ಜೀವ ಉಳಿಸಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಹೇಳಿದರು.


ನಂಜನಗೂಡು ತಾಲ್ಲೂಕಿನ ಹೆಡಿಯಲ ಗ್ರಾಮದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆಯಲ್ಲಿ ಹುಲ್ಲ ಹಳ್ಳಿ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಪಿಎಸ್ಐ ಚೇತನ್ ಕುಮಾರ್ ಚಾಲನೆ ನೀಡಿ, ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು.


ಬೈಕ್ ಸವಾರರು ತಮ್ಮ ಜೀವವನ್ನು ಉಳಿಸಲು ಹೆಲ್ಮೆಟ್ ಧರಿಸಿ ಸಂಚರಿಸಬೇಕು. ವಾಹನ ಚಲನೆ ಮಾಡುವಾಗ ಮೊಬೈಲ್ ಬಳಸಬಾರದು ಮತ್ತು ಪ್ರತಿಯೊಂದು ವಾಹನವನ್ನು ಚಾಲನೆ ಮಾಡಲು ಅಪ್ರಾಪ್ತ ಮಕ್ಕಳಿಗೆ ಕೊಡಬಾರದು.


ಒಂದು ವೇಳೆ ಅಪಘಾತ ಸಂಭವಿಸಿದರೆ ವಾಹನ ಮಾಲೀಕರೇ ದಂಡ ಕಟ್ಟಬೇಕಾಗುತ್ತದೆ. ಪ್ರತಿಯೊಂದು ವಾಹನಗಳಿಗೆ ಲೈಸೆನ್ಸ್ ಹೊಂದಿರಬೇಕು ಎಂದು ತಿಳಿಸಿದರು. ಇನ್ನೂ ಕೊತ್ತನಹಳ್ಳಿ ಗ್ರಾಮದ ಹಾಡಿ ನಿವಾಸಿಗಳಿಗೆ ಪೊಲೀಸ್ ಇಲಾಖೆಯಿಂದ ಕಾನೂನು ಮತ್ತು ಪೋಕ್ಸ್ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಪೇದೆ ದೊಡ್ಡಯ್ಯ, ಲಿಂಗರಾಜು, ರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.


Nk Channel Final 21 09 2023