Bengaluru 18°C

ಮೈಸೂರು: ಹದಗೆಟ್ಟ ರಸ್ತೆಯಲ್ಲಿ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಆದಿವಾಸಿಗಳು

ಹದಗೆಟ್ಟ ರಸ್ತೆಯಲ್ಲಿ ನಾಟಿ ಮಾಡಿ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಆದಿವಾಸಿಗಳಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.

ಮೈಸೂರು: ಹದಗೆಟ್ಟ ರಸ್ತೆಯಲ್ಲಿ ನಾಟಿ ಮಾಡಿ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಆದಿವಾಸಿಗಳಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ರಸ್ತೆ ಸರಿಪಡಿಸುವಂತೆ ಹಲವು ಭಾರಿ ಮನವಿ ಮಾಡಿದರು ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ.


ವಿದ್ಯುತ್ ಸೇರಿದಂತೆ ಇತರೆ ಮೂಲ ಸೌಲಭ್ಯಗಳಿಂದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಆದಿವಾಸಿಗಳು ವಂಚಿತರಾಗಿದ್ದಾರೆ. 3 ಕಿ.ಮೀ ದೂರದೂರಿನಿಂದ ಆದಿವಾಸಿಗಳು ಪಡಿತರ ತರುತ್ತಿದ್ದಾರೆ. ಭೀಮನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಮಾಸ್ತುಗುಡಿ ಹಾಡಿಗಳ ಸುಮಾರು 250 ಕುಟುಂಬಗಳಿವೆ.


ರಸ್ತೆ ಸಮಸ್ಯೆಗೆ ಪರಿಹಾರ ಕಲ್ಪಿಸಿ, ರಾತ್ರಿ ವೇಳೆ ಸಂಚರಿಸಲು ಭೀಮನಹಳ್ಳಿ ಇಂದ ಮಾಸ್ತಿಗುಡಿ ಹಾಡಿಯ ವರೆಗೂ ಬೀದಿ ದೀಪಗಳ ಅಳವಡಿಕೆ ಮಾಡಲು ಮನವಿ ಮಅಡಿದ್ದಾರೆ. ತಮ್ಮ ಗ್ರಾಮದಲ್ಲೆ ನ್ಯಾಯಬೆಲೆ ಅಂಗಡಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.


Nk Channel Final 21 09 2023