ಮೈಸೂರು : ಕೇಂದ್ರದ ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿ, ಇದು ತುಟಿಗೆ ತುಪ್ಪ ಸವರುವ ಬಜೆಟ್. ಕೃಷಿಗೆ ಮೊದಲ ಆದ್ಯತೆ ಕೋಡ್ತೀವಿ ಅಂದಿದ್ರು, ಕೃಷಿಗೆ ಬಜೆಟ್‌ನಲ್ಲಿ ಮೊದಲ ಆದ್ಯತೆ ಕೊಟ್ಟಿಲ್ಲ ಎಂದು ಕೇಂದ್ರದ ಬಜೆಟ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕಾ ಕ್ಷೇತ್ರಕ್ಕೂ ಏನು ಕೊಟ್ಟಿಲ್ಲ. ಈ ಬಜೆಟ್ ಮುಖಾಂತರ ಕೃಷಿ, ಸಣ್ಣ ಕೈಗಾರಿಕೆಯನ್ನ ನಾಶ ಮಾಡಕ್ಕೆ ಹೊರಟಿದೆ ಕೇಂದ್ರ ಸರ್ಕಾರ. ಕೃಷಿ ಕ್ಷೇತ್ರವನ್ನ ಕಾರ್ಪೋರೇಟಿಕರಣ ಮಾಡೋದನ್ನ ಮುಂದುವರೆಸಿದ್ದಾರೆ.
ಕೃಷಿಕರಿಗೆ ಉತ್ತೇಜನ ಕೊಡ್ತೀವಿ ಅಂದ್ರು. ಆದರೆ ಕೃಷಿಕನ ಪರಿಸ್ಥಿತಿ ಏನಾಗಿದೆ ಅನ್ನೋದನ್ನ ಬಜೆಟ್‌ನಲ್ಲಿ ನೋಡಿಲ್ಲ. ರೈತರ ಆತ್ಮಹತ್ಯೆಗಳಾಗುತ್ತಿವೆ. 384 ದಿನ ಹೋರಾಟ ನಡೆದಿದೆ. ಕೊಟ್ಟಂತ ಭರವಸೆಗಳ ಬಗ್ಗೆ ಏನು ಚಕಾರ ಎತ್ತಿಲ್ಲ. ಸಾಲ ಮನ್ನಾ ಮಾಡ್ತಿವಿ ಅಂದ್ರು ಅದರ ಬಗ್ಗೆಯೂ ಏನು ಹೇಳಿಲ್ಲ. ಮೈಕ್ರೋ ಫೈನಾನ್ಸ್‌ನಿಂದ ಆತ್ಮಹತ್ಯೆಗಳಾಗ್ತಿವೆ.
ಈ ಬಗ್ಗೆಯೂ ಏನು ಹೇಳಿಲ್ಲ. ಒಟ್ಟಾರೆ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನಿರಾಶಾದಾಯಕವಾದ ಬಜೆಟ್. ಕೇಂದ್ರದ ಬಜೆಟ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.