ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಮೂರನೆ ದಿನವಾಗಿದ್ದು, ಇಂದು ಶ್ರೀಕ್ಷೇತ್ರ ಸುತ್ತೂರು ರಥೋತ್ಸವವು ಬೆಳಿಗ್ಗೆ 11.10 ರ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗವ ಶ್ರಿಗಳು ರವಿಶಂಕರ್ ಗುರೂಜಿ ದಿವ್ಯ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗುವ ಸಾಧ್ಯತೆ ಇದೆ.
ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಮಾಜಿ ಸಚಿವರುಗಳಾದ ಜಿಟಿ ದೇವೆಗೌಡ , ಸಿಸಿ ಪಾಟೀಲ್ , ತನ್ವೀರ್ ಸೇಠ್ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಗಾಳಿಪಟ ಸ್ಪರ್ಧೆ ಹಾಗೂ 54ನೇ ದನಗಳ ಜಾತ್ರೆ ಉದ್ಘಾಟನೆ ನಡೆಯಲಿದೆ. ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ರಿಂದ ಉದ್ಘಾಟನೆ ಮಾಡಲಿದ್ದಾರೆ.