ಮೈಸೂರು: ಒಬ್ಬ ಎಸ್ಪಿಗೆ 100 ಲೀಟರ್ ಪೆಟ್ರೋಲ್ ಬಳಸಬೇಕು ಅಂತಾ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ವಾಹನಗಳಿಗೆ ಪೆಟ್ರೋಲ್ ಗೆ ಹಣ ಕೊಡಲಿಕ್ಕೂ ಹಿಂದೆ ಮುಂದೆ ನೋಡುತ್ತಿದೆ. ಈ ಕಾರಣಕ್ಕೆ ಕ್ರೈಂ ರೈಟ್ ಹೆಚ್ಚಾಗ್ತಿದೆ. ಹಾಗಾದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹೇಗೆ ನಿಯಂತ್ರಣ ಮಾಡುತ್ತಾರೆ ಕಾಂಗ್ರೆಸ್ ವಕ್ತಾರ ಎಂ.ಜಿ ಮಹೇಶ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ವಿಚಾರವಾಗಿ ಬಡವರ ಕಿಡ್ನಿಯನ್ನ ಮೈಕ್ರೋ ಪೈನಾನಸ್ಸ್ ಗಳು ಕದಿಯುತ್ತಿವೆ. ಸಾಲ ತೀರಿಸಲು ಆಗದೆ ಬಡವರು ಕಿಡ್ನಿ ಮಾರ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಒಂದು ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಬಿಜೆಪಿ ವಕ್ತಾರ ಮಹೇಶ್ ಆರೋಪವಾಗಿದೆ.
ಭರತ್ ಮಾತಾಕಿ ಜೈ ಎಂದರೆ ಕೆಲವರಿಗೆ ಬೇಸರ ಅಂತೆ. ಬಿಎ ಪದವಿ ಪಠ್ಯದಲ್ಲಿ ಭಾರತ್ ಮಾತಕೀ ಜೈ ಅಂದರೆ ಅದು ಸೋಲಿನ ಸಂಕೇತ ಎಂದು ಉಲ್ಲೇಖ ಮಾಡಿದ್ದಾರೆ. ಕರ್ನಾಟಕ ವಿವಿಯಲ್ಲಿ ಭಾರತಾಂಭೆಯ ಕಲ್ಪನೆ ಎಂಬ ಪುಸ್ತಕ ಇದೆ. ರಾಮಲಿಂಗಪ್ಪ ಟಿ ಬೇಗೂರು ಹಾಗೂ ದೇವನೂರು ಮಹದೇವ್ ಈ ಪಠ್ಯದ ಸಂಪಾದಕರು. ಪಠ್ಯ ಪುಸ್ತಕದ ಮೂಲಕ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಎಂ.ಜಿ ಮಹೇಶ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನ ಕಿಡ್ನಿ ಮಾರಿಕೊಳ್ಳುತ್ತಿದ್ದಾರೆ. ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಜನ ಕಿಡ್ನಿ ಮಾರಿಕೊಳ್ಳುವ ಸ್ಥಿತಿ ಬಂದಿದೆ. ಸಾಲ ತೀರಿಸಲಾಗದೆ ಕಿಡ್ನಿ ಮಾರಿಕೊಳ್ಳುತ್ತಿದ್ದಾರೆ. ಕೆಲವರು ಕೊಡಬೇಕಾದ ಸಾಲಕ್ಕೆ ಕಿಡ್ನಿ ನೀಡಿ ಜಾಮ ಮಾಡುತ್ತಿದ್ದಾರೆ. ಸಿಎಂ ಈ ವಿಚಾರವಾಗಿ ಇಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಭೆಯಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಸರಿ.
ಇಲ್ಲ ಎಂದರೆ ರಾಜ್ಯಾಧ್ಯಂತ ಹೋರಾಟ ನಡೆಸಲು ರುಪುರೇಷೆ ಕಲ್ಪಿಸಬೇಕಾಗುತ್ತದೆ. ಈಗಾಗಲೇ ಜನರು ಊರು ಬಿಡುವ ಪರಿಸ್ಥಿತಿ ಎದುರಾಗಿದೆ. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಬಗ್ಗೆ ಕಾನೂನು ಕಾಯ್ದೆ ತಂದಿದ್ದರು. ಆ ಕಾಯ್ದೆಯನ್ನೇ ತರುವ ಮೂಲಕ ರಾಜ್ಯದ ಜನರನ್ನ ರಕ್ಷಿಸಬೇಕಿದೆ. ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಹೇಳಿಕೆ ನೀಡಿದ್ದಾರೆ.