ಮೈಸೂರು: ಬಿಜೆಪಿ ಶಾಸಕ ಶ್ರೀವತ್ಸ ಸುದ್ದಿ ಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ತಿಂಗಳಿಗೊಂದು ಹಗರಣದಲ್ಲಿ ಸಿಕ್ಕಿಗೊಂಡಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗಳಿಗೆ ಹಣ ಇಲ್ಲದಂತಾಗಿದೆ. ಅಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಅನುದಾನ ಇಲ್ಲದೆ ಕ್ಷೇತ್ರಗಳಲ್ಲಿ ಸಮಸ್ಯೆ ಹೆಚ್ಚಾಗಿವೆ ಎಂದರು.
ಅದರಲ್ಲಿ ಪ್ರಸ್ತುತ ಪ್ರತಿ ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ 10 ಕೋಟಿ ಹಣವನ್ನ ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿಲ್ಲ. ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ಹೆಚ್ಚು ಒತ್ತನ್ನ ನೀಡುತ್ತಿದೆ. ಅನುದಾನದಲ್ಲೂ ತಾರತಮ್ಯ ಮಾಡುತ್ತಿದೆ. ಜನ ಕಷ್ಟ ಪಡುತ್ತಿದ್ದಾರೆ. ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗೆ ಅನುದಾನಗಳನ್ನ ಕೊಡುತ್ತಿಲ್ಲ. ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಮೈಸೂರಿನಲ್ಲಿ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಗದಗೆಟ್ಟಿದೆ. ಎದ್ದೇಳು ಮಂಜುನಾಥ ಎಂಬಂತೆ ಎದ್ದೇಳು ಪರಮೇಶ್ವರ ಎಂಬಂತಾಗಿದೆ. ಗೃಹ ಸಚಿವರ ಕಾರ್ಯವೈಖರಿಗೆ ಬಿಜೆಪಿ ಶಾಸಕ ಟಿ ಶ್ರೀವತ್ಸ ವ್ಯಂಗ್ಯವಾಡಿದರು. ರಾಜ್ಯದಲ್ಲಿ ದರೋಡೆ, ಅತ್ಯಾಚಾರ ಹೆಚ್ಚಾಗುತ್ತಿದೆ. ಗೃಹ ಸಚಿವ ಈಗಲಾದರು ಎದ್ದೇಳಬೇಕು ಎಂದರು.
ಪರಿಸ್ಥಿತಿ ಎದ್ದೇಳು ಪರಮೇಶ್ವರ ಎಂಬಂತಾಗಿದೆ. ದಿನಕ್ಕೊಂದು ಅತ್ಯಾಚಾರ, ದರೋಡೆಗಳು ನಡೆಯುತ್ತಿದೆ. ರಾಜ್ಯದ ಜನತೆಗೆ ಸುರಕ್ಷತೆಯ ಜೀವನ ನೀಡುತ್ತಿಲ್ಲ. ಈಗಲಾದ್ರೂ ಗೃಹ ಸಚಿವರು ಎದ್ದೇಳಬೇಕು ಎಂದು ಬಿಜೆಪಿ ಶಾಸಕ ಟಿ ಶ್ರೀವತ್ಸ ವ್ಯಂಗ್ಯವಾಡಿದರು.
ಮೈಸೂರು ರಾಜರನ್ನ ನಕಲಿ ಮಹಾರಾಜ ಅಂತ ಕಾಂಗ್ರೆಸ್ ವಕ್ತಾರ ಮಾತಾಡುತ್ತಾರೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಿರುದ್ದ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು. ಈ ವಕ್ತಾರ ನಕಲಿ ವಕ್ತಾರ, ಮೈಸೂರು ಅರಸರ ಬಗ್ಗೆ ಏನು ಗೊತ್ತಿಲ್ಲ. ಅದೇ ರೀತಿ ಈಗೀನ ಕಾಂಗ್ರೆಸ್ ನಕಲಿ ಕಾಂಗ್ರೆಸ್. ಆಗೀನ ಕಾಂಗ್ರೆಸ್ಸೇ ಬೇರೆ ಈಗಿನ ಕಾಂಗ್ರೆಸ್ಸೇ ಬೇರೆ. ಮೈಸೂರಿನ ಮನೆತನವನ್ನ ಅವಹೇಳನ ಮಾಡಿರುವ ವಕ್ತಾರರನ್ನ ಖಂಡಿಸುತ್ತೇವೆ. ಮೈಸೂರು ಅರಸರ ಬಗ್ಗೆ ಗೊತ್ತಿಲ್ಲದೆ ಮಾತ್ನಾಡಿದ್ದಾರೆ ಅವರು ತಿಳಿದು ಮಾತ್ನಾಡೋದನ್ನ ಕಲಿಬೇಕು ಎಂದರು.
ಗಾಂಧಿ ಭಾರತ ಸಮಾವೇಶದ ವಿಚಾರವಾಗಿ ಕಾಂಗ್ರೆಸ್‌ನವರ ಸಾಧನೆ ಏನು ಗೊತ್ತಿಲ್ಲ. ಈಗ ಸಾಧನೆ ಸಮಾವೇಶ ಮಾಡ್ತಿದ್ದಾರೆ. ಇದೊಂದು ನಕಲಿ ಸಮಾವೇಶ. ಯಾವ ಸಾಧನೆಯನ್ನು ಮಾಡಿಲ್ಲ. ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡ್ತಿಲ್ಲ. ಇದೊಂದು ದಿವಾಳಿ ಸರ್ಕಾರ. ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶ್ರೀವತ್ಸ ವಾಗ್ದಾಳಿ ನಡೆಸಿದರು.