ಮೈಸೂರು: ಫೈನಾನ್ಸ್ ಕಂಪನಿಗಳ ಅಟ್ಟಹಾಸ ಮಿತಿ ಮೀರಿದ್ದು, ಮಹೇಂದ್ರ ಫೈನಾನ್ಸ್ ಕಚೇರಿಗೆ ಆಟೋ ಚಾಲಕರು ನುಗ್ಗಿದ್ದಾರೆ. ಮೈಸೂರು ಆಟೋ ಚಾಲಕರು ರೊಚ್ಚಿಗೆದ್ದಿದ್ದಾರೆ. ಮಹೇಂದ್ರ ಫೈನಾನ್ಸ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹೇಂದ್ರ ಫೈನಾನ್ಸ್ ಕಚೇರಿ ಸಿಬ್ಬಂದಿಗಳೊಂದಿಗೆ ಆಟೋ ಚಾಲಕರ ಮಾತಿನ ಚಕಮಕಿ ನಡೆದಿದೆ. ಗೂಂಡಾಳನ್ನು ಬಳಸಿ ಆಟೋ ಸೀಜ್ ಮಾಡಿದ್ದಾರೆಂದು ಆಟೋ ಚಾಲಕರ ಆರೋಪವಾಗಿದೆ. ಮುಖ್ಯಮಂತ್ರಿಗಳ ಆದೇಶವನ್ನು ಲೆಕ್ಕಿಸದೆ ಮಹೇಂದ್ರ ಫೈನಾನ್ಸ್ ಉದ್ದಟತನ ಮೆರೆದಿದೆ.
ಮೂರು ತಿಂಗಳ ಕಂತು ಬಾಕಿ ಇದ್ದ ಆಟೋ ರಿಕ್ಷಾವನ್ನು ಬಲವಂತವಾಗಿ ಗೂಂಡಾಗಳು ಸೀಜ್ ಮಾಡಿದೆ. ನೋಟೀಸ್ ನೀಡದ ಆಟೋ ಸೀಜ್ ಮಾಡಿದ್ದಾರೆಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಮಹೇಂದ್ರ ಫೈನಾನ್ಸ್ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ ನಡೆಸಿದರು. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆ ಸಮೀಪ ಆಟೋ ಚಾಲಕರ ಪ್ರತಿಭಟನೆ ನಡೆಸಿದರು.