Bengaluru 28°C

ಮೈಸೂರು: ಮತ್ತೆ ಮುನ್ನಲ್ಲೆಗೆ ಬಂದ ಅಂದಾಕಾಸುರ ಸಂಹಾರದ ವಿವಾದ

ಮತ್ತೆ ಮುನ್ನಲ್ಲೆಗೆ ಬಂದ ಅಂದಾಕಾಸುರ ಸಂಹಾರದ ವಿವಾದ. ಜ.12 ರಂದು ನಡೆಯಲಿರುವ ಅಂದಾಕಾಸುರ ಸಂಹಾರದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಮೈಸೂರು : ಮತ್ತೆ ಮುನ್ನಲ್ಲೆಗೆ ಬಂದ ಅಂದಾಕಾಸುರ ಸಂಹಾರದ ವಿವಾದ. ಜ.12 ರಂದು ನಡೆಯಲಿರುವ ಅಂದಾಕಾಸುರ ಸಂಹಾರದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕಳೆದ ವರ್ಷ ನಂಜನಗೂಡಿನಲ್ಲಿ ಅಂದಾಕಾಸುರ ಸಂಹಾರದ ವೇಳೆ ನಡೆದಿದ್ದ ಭಾರಿ ಗಲಾಟೆ ಹಿನ್ನಲೆ. ನಿನ್ನೆ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಶಾಂತಿ ಸಭೆ ವಿಫಲವಾಗಿದೆ.


ನಂಜುಂಡೇಶ್ವರನ ಭಕ್ತರು ಹಾಗೂ ಅಂದಾಕಾಸುರ ಸಂಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಭಯ ತಂಡಗಳ ಮುಖಂಡರ ಸಭೆ ನಡೆಸಿದ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್ ಪಿ ರಘು. ಕಳೆದ ವರ್ಷ ಅಂದಾಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಿದ ಕಾರಣ ಉಂಟಾಗಿದ ಗಲಾಟೆ. ಈ ವೇಳೆ ನಂಜುಂಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿದ ದಲಿತ ಸಂಘಟನೆಗಳ ಕೆಲ ಸದಸ್ಯರು. ನಂಜನಗೂಡು ಉದ್ವಿಗ್ನ ಗೊಂಡು ಬಂದ್ ಸಹ ಆಗಿತ್ತು.


ಈ ಹಿನ್ನೆಲೆ ಈ ವರ್ಷ ನಡೆಯ ಬೇಕಾದ ಅಂದಾಕಾಸುರ ಸಂಹಾರದ ಕುರಿತು ಶಾಂತಿ ಸಭೆ. ಕಳೆದ ಬಾರಿಯಂತೆ ಸಮಸ್ಯೆ ಆಗ ಬಾರದೆಂದು ಆಕ್ಷೇಪಾರ್ಹವಾದ ಅಂದಾಕಾಸುರನ ಚಿತ್ರ ಬದಲಿಸಿ ರಾಜ್ಯ ಆಗಮ ಶಾಸ್ತ್ರ ಪಂಡಿತರ ಜೊತೆ ಚರ್ಚಿಸಿ ಶಿವ ಪುರಾಣದಲ್ಲಿ ಬರುವ ಅಂದಾಕಾಸುರನ ವರ್ಣನೆಗೆ ತಕ್ಕಹಾಗೆ ಚಿತ್ರ. ನೂತನ ಚಿತ್ರ ಪಟವನ್ನು ತಹಶಿಲ್ದಾರ್, ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಪ್ರದರ್ಶನ.


 

ನೂತನ ಚಿತ್ರಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ. ಆದರೆ ದಲಿತ ಸಂಘರ್ಷ ಸಮಿತಿಯ ಮಲ್ಲಹಳ್ಳಿ ನಾರಾಯಣ್ ಮಾತನಾಡಿ ಇದೊಂದು ಮಾನವೀಯತೆ ಇಲ್ಲದ ಆಚರಣೆ ಇದು ನಿಲ್ಲ ಬೇಕೆಂದು ಆಕ್ಷೇಪ. ಈ ಆಚರಣೆ ನಿಲ್ಲಿಸ ಬೇಕೆಂದು ನಾವು ಸರ್ಕಾರಕ್ಕೆ ಪತ್ರ ಬರೆದ್ದಿದ್ದೆವೇ. ಈ ಆಚರಣೆ ನಿಲ್ಲಿಸುವ ಕುರಿತು ಕಾನೂನು ಹೋರಾಟವನ್ನು ಮಾಡುತ್ತಿದ್ದೆವೆ.


ಅಂದಾಕಾಸುರನ ಚಿತ್ರವನ್ನು ಯಾರು ತುಳಿಯ ಬಾರದು ಹಾಗೂ ಅಂದಾಕಾಸುರನ ಚಿತ್ರವನ್ನು ಚಿಕ್ಕದಾಗಿ ಬರೆದುಕೊಂಡು ಆಚರಣೆ  ಮಾಡಿಕೊಳ್ಳಬೇಕೆಂದು ಆಕ್ಷೇಪ. ಇದಕ್ಕೆ ಒಪ್ಪದ ನಂಜುಂಡೇಶ್ವರ ಭಕ್ತರು. ಮಹಿಷಾಸುರನ  ಹೋಲುವ ಚಿತ್ರ ತೆಗೆಯುವುದು ಅವರ ಬೇಡಿಕೆ. ದೇವಾಲಯದ ಆಡಳಿತ ಮಂಡಳಿ ಬದಲಿಸಿ ಸಮಸ್ಯೆಗೆ ಪರಿಹಾರ ತಂದಿದೆ.


ಆದರೆ ಈಗ ಅಂದಾಕಾಸುರನ ಚಿತ್ರವನ್ನು ತುಳಿಯ ಬಾರದು ಚಿಕ್ಕದಾಗೆ ಚಿತ್ರ ಬರೆಯಬೇಕು ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಾ ಬೇರೆ ವರಸೇ ತೆಗೆಯುತ್ತಿರುವುದು ಸರಿಯಲ್ಲ. ಇದು ನಂಜನಗೂಡಿನ ಶಾಂತಿ ಕದಡುವ ಹುನ್ನಾರ. ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಕೈಪಿಡಿಯಲ್ಲಿ ಇರುವಂತೆ  ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೇಯೋ ಅದೇ ನಡೆಯಬೇಕು.


ಇವರು ಹೇಳಿದಂತೆ ಬದಲಾವಣೆ ಒಪ್ಪಲು ಸಾಧ್ಯವಿಲ್ಲ.  ಇದು ನಮ್ಮ ಧಾರ್ಮಿಕ ಆಚರಣೆ ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಇದೊಂದು ಸಂವಿಧಾನ ವಿರೋಧಿ ನಡೆ. ಈ ಕುರಿತು ನಂಜುಂಡೇಶ್ವರನ ಭಕ್ತರೆಲ್ಲರು ಸೇರೆ ಮುಂದೇ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲ್ಲಿದ್ದೆವೆ. ಯುವಾ ಬ್ರಿಗೇಡ್ ಸಂಘಟಕ ಚಂದ್ರಶೇಖರ್ ಹೇಳಿಕೆ ನೀಡಿದರು.


 

Nk Channel Final 21 09 2023