Bengaluru 28°C
Ad

ಕಿಡಿಗೇಡಿಗಳಿಂದ ಬೇಕರಿ ಪೀಠೋಪಕರಣಗಳು ಧ್ವಂಸ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Mysr

ನಂಜನಗೂಡು: ಬೇಕರಿಯೊಂದರ ಪೀಠೋಪಕರಣಗಳನ್ನು ಮೂವರು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುರಾ ಗ್ರಾಮದಲ್ಲಿ ನಡೆದಿದೆ.

ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿಡಿಗೇಡಿಗಳ ಆಟಾಟೋಪವನ್ನು ಬೇಕರಿ ಮಾಲೀಕ ಸಿಸಿ ದೃಶ್ಯಾವಳಿ ಸಮೇತ ಹುಲ್ಲಹಳ್ಳಿ ಠಾಣೆಯಲ್ಲಿ ದೂರು ನೀಡಿದರೂ ಎಫ್ಐಆರ್ ದಾಖಲಿಸದೆ ಅಸಂಜ್ಞೆಯ ಅಪರಾಧವೆಂಬ ಕಾರಣ ನೀಡಿ, ನ್ಯಾಯಾಲಯದ ಆದೇಶ ತರುವಂತೆ ಹಿಂಬರಹ ನೀಡಿರುವುದು ಬೆಳಕಿಗೆ ಬಂದಿದೆ. ಹುರಾ ಗ್ರಾಮದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಯಜಮಾನ ಮಳಿಗೆಗಳನ್ನ ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದರು. ಮಳಿಗೆಗಳಿಂದ ಬಂದ ಆದಾಯವನ್ನು ದೇವಾಲಯದ ಅಭಿವೃದ್ದಿಗೆ ಬಳಸಲಾಗುತ್ತಿತ್ತು.

ಈ ವಿಚಾರದಲ್ಲಿ ಗ್ರಾಮದ ಈಗಿನ ಯಜಮಾನ ರಾಜಕೀಯ ವೈಶ್ಯಮ್ಯಕ್ಕೆ ದೇವಾಲಯಕ್ಕೆ ಸೇರಿರುವ ಅಂಗಡಿ ಮಳಿಗೆಗಳನ್ನು ಕೆಲವು ದಿನಗಳ ಹಿಂದೆ ಬಂದ್ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಮಳಿಗೆಗಳಲ್ಲಿ ನಡೆಸಲಾಗುತ್ತಿದ್ದ ಓಂಕಾರ್ ಬೇಕರಿಯ ಟೀ ಕೌಂಟರ್, ಜ್ಯೂಸ್ ಕೌಂಟರ್,ಚಾಟ್ಸ್ ಕೌಂಟರ್, ಟೇಬಲ್ ಗಳು, ಗ್ಲಾಸ್ ಗಳನ್ನ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಅಲ್ಲದೆ ಬೇಕರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ನಾಶ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೇಕರಿ ಮಾಲೀಕ ಪಾಪಣ್ಣ ರವರಿಗೆ 2 ರಿಂದ 3 ಲಕ್ಷ ನಷ್ಟವಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳ ಸಮೇತ ಪಾಪಣ್ಣ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಡಯ್ಯ, ಶಿವಮೂರ್ತಿ, ಶಶಿಧರ್ ರವರ ಕುಮ್ಮಕ್ಕಿನಿಂದ ಕುಮಾರ್, ಕಮಾಲ್ ಕುಮಾರ್, ಪ್ರವೀಣ್ ಕುಮಾರ್ ಎಂಬುವರು ಧ್ವಂಸ ಮಾಡಿದ್ದಾರೆಂದು ಉಲ್ಲೇಖಿಸಿದ್ದಾರೆ. ದೂರಿಗೆ ಸೂಕ್ತವಾಗಿ ಸ್ಪಂದಿಸದ ಹುಲ್ಲಹಳ್ಳಿ ಠಾಣಾ ಪೊಲೀಸರು ಕೇವಲ ಎನ್.ಸಿ.ಆರ್.ನೀಡಿ ಸಾಗಿ ಹಾಕಿದ್ದಾರೆ. ಎಫ್.ಐ.ಆರ್.ದಾಖಲಿಸಲು ನ್ಯಾಯಾಲಯದಿಂದ ಆದೇಶ ತರುವಂತೆ ಹಿಂಬರಹ ನೀಡಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳಿದ್ದರೂ ಪ್ರಕರಣ ದಾಖಲಿಸಲು ಹುಲ್ಲಹಳ್ಳಿ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

Ad
Ad
Nk Channel Final 21 09 2023
Ad