Bengaluru 28°C
Ad

ಕಾರು, ಬೈಕ್​ ನಡುವೆ ಭೀಕರ ಅಪಘಾತ: ಒಂದು ವರ್ಷದ ಮಗು ಮೃತ್ಯು

ಕಾರು ವೇಗವಾಗಿ ಬಂದು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಮೈಸೂರಿನ ಇಲವಾಲ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದ್ದು, ಲಿಖಿತ್​ ಎಂಬ 1 ವರ್ಷದ 2 ತಿಂಗಳ ಮಗು ಸಾವನ್ನಪ್ಪಿದೆ.

ಮೈಸೂರು: ಕಾರು ವೇಗವಾಗಿ ಬಂದು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಮೈಸೂರಿನ ಇಲವಾಲ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದ್ದು, ಲಿಖಿತ್​ ಎಂಬ 1 ವರ್ಷದ 2 ತಿಂಗಳ ಮಗು ಸಾವನ್ನಪ್ಪಿದೆ.

ಬೈಕ್​​ನಲ್ಲಿ ಮಗುವಿನೊಂದಿಗೆ ದಂಪತಿ ಹೋಗುತ್ತಿತ್ತು. ಆಗ ದಿಢೀರ್​ ಎಂದು ಕಾರ್​ ಒಂದು ವೇಗವಾಗಿ ಬಂದು ಗುದ್ದಿದೆ. ಕಾರು​ ಗುದ್ದಿದ ರಭಸಕ್ಕೆ ಬೈಕ್​ ಪೀಸ್​ ಪೀಸ್​ ಆಗಿದೆ. ಬೈಕ್​​ನಿಂದ ಕೆಳಗೆ ಬಿದ್ದ ಗಂಡ ಹೆಂಡತಿ ಪರಿಸ್ಥಿತಿ ಗಂಭೀರವಾಗಿತ್ತು.

ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು, ಮಗು ಉಳಿಯಲಿಲ್ಲ ಎಂದು ತಿಳಿದು ಬಂದಿದೆ. ತಂದೆ ಪುತ್ತೂರಿನ ಕಾಲೇಜ್​ ಒಂದರಲ್ಲಿ ಅಧ್ಯಾಪಕರು ಆಗಿದ್ದರು. ತಾಯಿ ಕೂಡ ಉಪನ್ಯಾಸಕಿ ಆಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023