News Karnataka Kannada
Tuesday, April 23 2024
Cricket
ಮೈಸೂರು

ಶೀಘ್ರವೇ ಮೈಸೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಸರ್ವೇ

Survey for Peripheral Ring Road in Mysuru soon
Photo Credit : By Author

ಮೈಸೂರು: ಮೈಸೂರು ನಗರದಲ್ಲಿ ವಾಹನದಟ್ಟಣೆ ನಿಯಂತ್ರಣಕ್ಕೆ, ಅಭಿವೃದ್ಧಿಗೆ ಪೂರಕವಾಗಿ ಬೇಕಿರುವ ಹೊರ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಶೀಘ್ರದಲ್ಲೇ ಪ್ರಾಥಮಿಕ ವರದಿ ತಯಾರಿಸಲು ಸರ್ವೇ ಕೆಲಸ ಆರಂಭವಾಗಲಿದೆ ಎಂದು ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಚನ್ನಕೇಶವ ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ 2040ರ ವೇಳೆಗೆ ಜನಸಂಖ್ಯೆ 25ರಿಂದ 30 ಲಕ್ಷಕ್ಕೆ ಏರಬಹುದು ಎಂಬುದನ್ನು ಗುರಿಯಾಗಿರಿಸಿಕೊಂಡು ಮುಡಾ ಈ ಹಿಂದೆಯೇ ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ 750 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಮುಂದಾಗಿತ್ತು. ಆದರೆ ಆಗ ಯೋಜನೆ ಸಂಬಂಧ ಸಮೀಕ್ಷೆಯೇ ನಡೆಯದೆ ನೆನೆಗುದಿಗೆ ಬಿದ್ದಿತ್ತು. ಬಳಿಕವೂ ಇರುವ ವರ್ತುಲ ರಸ್ತೆಯಿಂದ (ರಿಂಗ್ ರೋಡ್) 5 ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯವಿದೆ, ಯಾವ ಗ್ರಾಮಗಳ ಮೇಲೆ ಹಾದು ಹೋಗುತ್ತದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಮುಡಾ 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದರೂ ಯೋಜನೆ ಟೇಕಾಫ್ ಆಗಿರಲಿಲ್ಲ. ಈಗ ಆ ಯೋಜನೆಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿದೆ.

ಎರಡು ತಿಂಗಳಲ್ಲಿ ವಿಸ್ತೃತ ವರದಿ: ರಸ್ತೆ ನಿರ್ಮಾಣದ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸುವ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಜು.23ಕ್ಕೆ ಮುಕ್ತಾಯವಾಗಲಿದೆ. ಅಲ್ಲಿವರೆಗೂ ಆಸಕ್ತರು ಟೆಂಡರ್‌ನಲ್ಲಿ ಭಾಗಿಯಾಗಬಹುದು. 23ರಂದೇ ಟೆಂಡರ್ ಅಂತಿಮಗೊಳ್ಳಲಿದೆ. ಅತೀ ಕಡಿಮೆ ಮೊತ್ತವನ್ನು ಕೋಟ್ ಮಾಡಿದವರಿಗೆ ಟೆಂಡರ್ ನೀಡಲಾಗುತ್ತದೆ. ಬಳಿಕ ಸರ್ವೇ ಕಾರ್ಯ ಆರಂಭವಾಗಲಿದೆ.

ಟೆಂಡರ್ ಪಡೆಯುವವರು ಸರ್ವೇ ನಡೆಸಿ 2 ಅಥವಾ 3 ತಿಂಗಳ ಒಳಗೆ ಯೋಜನೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಿದ್ದಾರೆ. ಬಳಿಕ ಸದರಿ ಸರ್ವೇ ವರದಿಯನ್ನು ಮುಡಾ ವತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಂತರ ಸರ್ಕಾರ ನಿರ್ದೇಶನ, ಅನುದಾನದ ಆಧಾರದ ಮೇಲೆ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು