Ad

ಗುತ್ತಿಗೆ ಶಿಕ್ಷಕಿಯರ ರಾಜಕೀಯ: ಸಾಮೂಹಿಕ ವರ್ಗಾವಣೆ ಪತ್ರ ಪಡೆಯಲು ಮುಂದಾದ ವಿದ್ಯಾರ್ಥಿನಿಯರು!

ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಸ್ವಾಭಿಮಾನಿ ಬದುಕನ್ನು ರೂಪಿಸಿಕೊಳ್ಳಲಿ ಎಂದು ಶ್ರಮಪಟ್ಟು ವಿದ್ಯಾಲಯಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ.

ನಂಜನಗೂಡು: ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಸ್ವಾಭಿಮಾನಿ ಬದುಕನ್ನು ರೂಪಿಸಿಕೊಳ್ಳಲಿ ಎಂದು ಶ್ರಮಪಟ್ಟು ವಿದ್ಯಾಲಯಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ.

Ad
300x250 2

ಆದರೆ, ದೇಶದ ಭವಿಷ್ಯ ಪ್ರಜೆಗಳನ್ನು ರೂಪಿಸಬೇಕಾದ ಹೊರಗುತ್ತಿಗೆ ಶಿಕ್ಷಕಿಯರ ರಾಜಕೀಯ ಪ್ರತಿಷ್ಠೆಯಿಂದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ವರ್ಗಾವಣೆ ಪತ್ರ ಪಡೆದುಕೊಳ್ಳಲು ಮುಂದಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ನಂಜನಗೂಡು ಪಟ್ಟಣದ 18ನೇ ತಿರುವಿನಲ್ಲಿರುವ ಕಸ್ತೂರಬಾ ಬಾಲಿಕ ವಿದ್ಯಾಲಯ ಟೈಪ್ ಒಂದರಲ್ಲಿ ಬರೋಬ್ಬರಿ 90ಕ್ಕೂ ಅಧಿಕ ವಿದ್ಯಾರ್ಥಿನಿಯರು ಆರರಿಂದ ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದಿಂದ ವಿದ್ಯಾಲಯದ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿನಿಯರ ಪೋಷಣೆಗಾಗಿ ಲಕ್ಷಾಂತರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.

ಸ (1)

ಈ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಮೈಸೂರಿನ ಆನಂದ ನಗರದ ರಂಗನಾಥ ಎಲೆಕ್ಟ್ರಾನಿಕ್ ಮತ್ತು ಇಂಜಿನಿಯರಿಂಗ್ ಎಂಬ ಖಾಸಗಿ ಸಂಸ್ಥೆಯ ಮೂಲಕ ಬರೋಬ್ಬರಿ 13ಕ್ಕೂ ಹೆಚ್ಚು ಜನ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಮೂರು ಜನ ಶಿಕ್ಷಕಿಯರು ಸೇರಿದಂತೆ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

ಈ ವಿದ್ಯಾಲಯದಲ್ಲಿ ಖಾಯಂ ಸರ್ಕಾರಿ ಮುಖ್ಯ ಶಿಕ್ಷಕಿ ನಿವೃತ್ತಿಯಾದ ಬಳಿಕ ಇದುವರೆಗೂ ನೂತನವಾಗಿ ಸರ್ಕಾರಿ ಮುಖ್ಯ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿಲ್ಲ. ಈ ಹಿಂದೆ ಈ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ನಿಲಯ ಪಾಲಕರಾಗಿ ಧನಲಕ್ಷ್ಮಿ ಎಂಬವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ಸಿಬ್ಬಂದಿ ಮತ್ತು ಶಿಕ್ಷಕಿಯರ ರಾಜಕೀಯ ಜಂಜಾಟಕ್ಕೆ ಗುಂಪುಗಾರಿಕೆಯಿಂದ ನಿಲಯ ಪಾಲಕಿ ಧನಲಕ್ಷ್ಮಿ ಎಂಬುವರನ್ನು ಇಲ್ಲಸಲ್ಲದ ಆರೋಪ ಮಾಡಿ ವಿದ್ಯಾಲಯದಿಂದ ಹೊರ ದಬ್ಬಲಾಗಿದೆ.

ರಾಜ್ಯದ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿನಿಯರು ಇಲ್ಲಿ ಬಂದು ವಿದ್ಯಾಭ್ಯಾಸ ಮಾಡಲು ದಾಖಲಾಗಿದ್ದಾರೆ. ಹೊರಗುತ್ತಿಗೆ ಶಿಕ್ಷಕಿಯರು ಮತ್ತು ಸಿಬ್ಬಂದಿಗಳ ರಾಜಕೀಯ ಜಂಜಾಟಕ್ಕೆ ಈ ವಿದ್ಯಾಲಯದಲ್ಲಿ ಸರಿಯಾದ ಪಾಠ ಪ್ರವಚನ ನಡೆಯದೆ ಈಗ ವಿದ್ಯಾರ್ಥಿನಿಯರು ಮತ್ತು ಪೋಷಕರು ನೆಚ್ಚಿನ ನಿಲಯ ಪಾಲಕರನ್ನು ವಜಗೊಳಿಸಿರುವ ಕಾರಣ ನಮ್ಮ ಮಕ್ಕಳನ್ನು ಸುಸಜ್ಜಿತವಾಗಿ ನೋಡಿಕೊಳ್ಳುತ್ತಿದ್ದ ನಿಲಯ ಪಾಲಕರಿಲ್ಲದೆ ನಾವು ಇಲ್ಲಿ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವುದಿಲ್ಲ ಎಂದು ಸಾಮೂಹಿಕವಾಗಿ ವರ್ಗಾವಣೆ ಪತ್ರ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ.

Ad
Ad
Nk Channel Final 21 09 2023
Ad