ಮೈಸೂರು: ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎಂದು ಜೆ ಎಸ್ ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಬಿ.ವಿ.ಶಾಂಭ ಶಿವಯ್ಯ ಕಿವಿಮಾತು ಹೇಳಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆ, ಜೆ.ಎಸ್.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಬಾರ್ಕ್ಲೆನ್ ಸಹಯೋಗದೊಂದಿಗೆ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿ ನೆರೆದಿರುವ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳ ಉತ್ತಮವಾದ ಸೇತುವೆಯಾಗಿದೆ. ನಿಮ್ಮ ವೃತ್ತಿಪರ ಜಗತ್ತಿಗೆ ಹೆಜ್ಜೆ ಹಾಕುವ ಸಿದ್ಧತೆಯನ್ನು ತೋರಿಸುತ್ತದೆ. ಈ ತರೆದ ಬಾಗಿಲುಗಗಳಂತಹ ಅವಕಾಶಗಳು ಕೈಗೆಟುಕದಂತೆ ತೋರಬಹುದು ಮತ್ತು ಅವುಗಳನ್ನು ಆತ್ಮವಿಶ್ವಾಸ ಮತ್ತು ಅವವಾದದಿಂದ ವಶಪಡಿಸಿಕೊಳ್ಳಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯ ಕೇಂದ್ರೀಯ ಮುಖ್ಯಸ್ಥ ಸುಭಾಸ್ ಮಾತನಾಡಿ, ಸಮರ್ಥನಂ ಸಂಸ್ಥೆ ಅವಕಾಶ ವಂಚಿತರ ಸಬಲೀಕರಣಕ್ಕಾಗಿ ದುಡಿಯುತ್ತಿದ್ದೆ. ದೇಶಾದ್ಯಂತ 150ಕ್ಕು ಹೆಚ್ಚು ಉದ್ಯೋಗ ಮೇಳಗಳನ್ನು ಸಂಘಟಿಸಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಪ್ರಭು ಮಾತನಾಡಿ, ವಿದ್ಯಾಭ್ಯಾಸದ ಸಮಯದಲ್ಲೇ ಉದ್ಯೋಗ ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು, ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯೆಂದರೆ ವಿದ್ಯಾರ್ಥಿ ಉದ್ಯೋಗ ಪಡೆದು ತಮ್ಮ ಜೀವನ, ಕುಟುಂಬ ಹಾಗೂ ಸಮಾಜದ ಏಳಿಗೆಗೆ ಶ್ರಮಿಸುವುದು ಎಂದು ತಿಳಿಸಿದರು. ಸದರಿ ಉದ್ಯೋಗ ಮೇಳದಲ್ಲಿ 32 ಕಂಪನಿಗಳು, 820 ಅಭ್ಯರ್ಥಿಗಳು ಭಾಗವಹಿಸಿ, 215 ಕೂ ಹೆಚ್ಚು ಅಭ್ಯರ್ಥಿಗಳು ನೇರ ನೇಮಕ ಮತ್ತು ಮುಂದಿನ ಸಂದರ್ಶನಕ್ಕೆ ಆಯ್ಕೆ ಆಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕಾಲೇಜಿನ ಉದ್ಯೋಗ ಅಧಿಕಾರಿ ಜಿ.ಕಾರ್ತಿಕ, ಸಮರ್ಥನಂ ಸಂಸ್ಥೆಯ ಶಿವರಾಜು, ಡಾ. ಸೌಮ್ಯಾ, ಡಾ.ಕಿರಣ್, ಡಾ. ಎಲ್. ವಿನಯ್ ಕುಮಾರ್, ವೀರಭದ್ರ ಪಟೇಲ್, ಸೇರಿದಂತೆ ಮತ್ತಿತ್ತರು ಭಾಗವಹಿಸಿದ್ದರು