ಮೈಸೂರು: ಇತಿಹಾಸ ಪ್ರಸಿದ್ಧ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಧೆ ಉತ್ಸವವು ಸಡಗರದಿಂದ ನೆರವೇರಿತು.
ಜ 3 ರಂದು ಹಸ್ತ್ಥಾನ ಅಂಕುರಾರ್ಪಣಯ ಮೂಲಕ ಜಾತ್ರೆಗೆ ಸಾಂಕೇತಿಕವಾಗಿ ಚಾಲನೆ ದೊರೆತಿದ್ದು, ಅಮ್ಮ ನವರ 7 ದಿನಗಳ ಮೌನವೃತ ದೊಂದಿಗೆ ರಾಕ್ಷಸರನ್ನು ಸಂಹಾರ ಮಾಡುವ ತಪ್ಪಸಿನ ಆಚರಣೆಯೇ ವಧೆ ಉತ್ಸವ, ಪ್ರಮುಖ ರಸ್ತೆಗಳು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ದೊಂದಿಗೆ, ಗ್ರಾಮದ ಅಂಬೇಡ್ಕರ್ ಬಡಾವಣೆಯೊಂದರ ಹೆಬ್ರೆ ಮನೆಯಿಂದ ಮುಖಂಡರೊಡನೆ ಹೊರಟ ಹೆಬ್ರೆಯ ಉತ್ಸವವು,
ದುಬ್ಲಮ್ಮನವರ ದೇಗುಲದಲ್ಲಿ ಕಂಕಣಧಾರಿ ಅರ್ಚಕರು ಸೇರಿದಂತೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ದೇಗುಲಕ್ಕೆ ಆಗಮಿಸುವ ಮಾರ್ಗದುದ್ದಕ್ಕೂ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೆಬ್ರೆಗಳಿಗೆ ಹೂ, ಅಕ್ಕಿ ಎಣ್ಣೆ ಎರೆದು ಭಕ್ತಿ ಭಾವ ಮೆರೆದರು.
ರೈತರು ಭತ್ತದ ಹುಲ್ಲನ್ನು ತಂದು ಅಮ್ಮ ನವರ ದೇವಾಲಯದ ಮುಂದೆ ಹಾಕಲಾಗಿದ್ದ ಹುಲ್ಲಿನ ರಾಶಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಹೆಬ್ರೆಗಳ ಸಮೇತ ದೇಗುಲ ಪ್ರವೇಶಿಸಿ ಬಳಿಕ ಕಂಕಣಧಾರಿ ಅರ್ಚಕರು ಅಮ್ಮ ನವರಿಗೆ ವಿವಿಧ ಬಗೆಯ ಮಂಗಳಾರತಿ ಮಾಡಿದರು. ದೊಡ್ಡ ಕೆರೆಯ ಬಳಿ ಇರುವ ಕಣಿಯರ ಮಂಟಪದಲ್ಲಿ ರಾತ್ರಿ ಕಣಿಯರ ಸಮುದಾಯದ ವತಿಯಿಂದ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉತ್ಸವ ನಡೆಸಲಾಯಿತು. ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಅರ್ಚಕ ಸಮೂಹ ಹಾಗೂ ಗ್ರಾಮಸ್ಥರು ಸಾಕ್ಷಿಯಾಗಿದರು.