ಗುಂಡ್ಲುಪೇಟೆ: ವೈದ್ಯರ ನಿರ್ಲಕ್ಷ್ಯಕ್ಕೆ ಆರು ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೊಮ್ಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಶೋಭ ಎಂಬುವವರು ಹಂಗಳ ಗ್ರಾಮದ ಆನಂದ್ ಎಂಬುವವರನ್ನು ಮದುವೆಯಾಗಿ ಈ ಜೋಡಿಗೆ ಆರು ತಿಂಗಳ ಮುದ್ದಾದ ಗಂಡು ಮಗು ಇತ್ತು. ಮಗುವಿಗೆ ಆರು ತಿಂಗಳಾದ ಕಾರಣ ಕಿವಿ ಚುಚ್ಚಿಸಲು ಶೋಭಾ ತಾಯಿ ಜೊತೆ ಬೊಮ್ಮಲಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ ಅಲ್ಲಿ ವೈದ್ಯ ನಾಗರಾಜು ಮಗುವಿನ ಎರಡು ಕಿವಿಗೆ ಅನಸ್ತೇಸಿಯಾ ಚುಚ್ಚುಮದ್ದು ನೀಡಿದ್ದಾರೆ ಮಗು ನೊರೆ ವಾಂತಿ ಮಾಡಿದೆ ತಕ್ಷಣ ಮಗು ಸಾವನ್ನಪ್ಪಿದೆ ಎಂದು ಮಗುವಿನ ತಾಯಿ ಶೋಭ ಆರೋಪಿಸಿದ್ದಾರೆ.
ವೈದ್ಯೋನಾರಾಯಣಹರಿ ಎಂದು ಹೇಳುವ ಮಾತು ಇಲ್ಲಿ ಸುಳ್ಳಾಗಿದ್ದು ಮಗು ಮೃತಪಟ್ಟರೂ ಮಾನವೀಯ ದೃಷ್ಠಿಯಿಂದ ಮಗು ನೋಡಲು ಬರಲಿಲ್ಲ ಘಟನೆಯಾಗಿ ಆರು ಗಂಟೆ ಕಳೆದರೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಕುಟುಂಬಕ್ಕೆ ವೈದ್ಯಾಧಿಕಾರಿಗಳಿಂದಾಗಲಿ ಅಸ್ಪತ್ರೆಯ ಸಿಬ್ಬಂದಿಗಳಿಂದ ಸಾಂತ್ವಾನ ಮಾತು ಬರಲಿಲ್ಲ ನಮಗೂ ಇದಕ್ಕೂ ಸಂಬಂಧವಿಲ್ಲದವರಂತೆ ವರ್ತಿಸುವುದು ಕಂಡು ಬಂದು ಮೃತಪಟ್ಟ ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಮಗುವನ್ನು ವೈದ್ಯ ನಾಗರಾಜು ಕೊಂದಿದ್ದಾರೆ ಇನ್ಯಾರಿಗೂ ಇಂಥ ನೋವು ಬರಬಾರದು ಇಂತಹ ಘಟನೆ ಮರುಕಳಿಸಬಾರದು ಕೂಡಲೇ ವೈದ್ಯ ನಾಗರಾಜು ಅಮಾನತ್ತು ಆಗಬೇಕು, ಅತನ ವಿರುದ್ದ ಕ್ರಮವಾಗಬೇಕು ಯಾಕೆ ಮಗು ಬಲಿ ಪಡೆದೆ ಎಂದು ಕೇಳುತ್ತೇವೆ ಅವನನ್ನು ಕರೆಸಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದರು.