Bengaluru 23°C
Ad

ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ

ಸಿದ್ಧರಾಮಯ್ಯ ವ್ಯಕ್ತಿ ಅಲ್ಲ, ಶಕ್ತಿ ಎಂದು ಗುರುತಿಸಲು ಕಾರಣ ಎಚ್.ಡಿ.ದೇವೇಗೌಡರು. ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದು ನೀವಲ್ಲ, ನಾಡಿನ ಜನರು ಎನ್ನುವುದನ್ನು ಅರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ಮೈಸೂರು: ಸಿದ್ಧರಾಮಯ್ಯ ವ್ಯಕ್ತಿ ಅಲ್ಲ, ಶಕ್ತಿ ಎಂದು ಗುರುತಿಸಲು ಕಾರಣ ಎಚ್.ಡಿ.ದೇವೇಗೌಡರು. ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದು ನೀವಲ್ಲ, ನಾಡಿನ ಜನರು ಎನ್ನುವುದನ್ನು ಅರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

Ad

ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ ಎಚ್.ಡಿ.ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸದೆ ತುಳಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಿಮ್ಮ ಎಡ-ಬಲ ಭಾಗದಲ್ಲಿ ಕುಳಿತವರನ್ನು ಎತ್ತರಕ್ಕೆ ಬೆಳೆಸಿರುವುದು ಎಚ್‌ಡಿಡಿ ಹೊರತು ನೀವಲ್ಲ.

Ad

ಎಚ್.ಎಸ್.ಶಂಕರಲಿಂಗೇಗೌಡರು ಸದಾ ಹೇಳುತ್ತಿದ್ದ ಮಾತಲ್ಲಿ ಹೇಳುವುದಾದರೇ ಪ್ರತಿಯೊಬ್ಬರಿಗೂ ಶಾಸಕನಾಗಿ, ಮಂತ್ರಿಯಾಗಿ, ಮೇಲೆ ಬರಬೇಕು ಎನ್ನುವ ಆಸೆ ಇರುತ್ತದೆ. ಅದೇ ರೀತಿ ಮಂತ್ರಿಗಿರಿ ಕೊಡಲಿಲ್ಲವೆಂದು ಪಕ್ಷಕ್ಕೆ ದ್ರೋಹ ಎಸಗಿ ನಾನಾ ಕಾರಣಕ್ಕಾಗಿ ಪಕ್ಷ ಬಿಟ್ಟು ಹೋದವರನ್ನು ಇಟ್ಟುಕೊಂಡು ಮಾತನಾಡುತ್ತಾರೆ ಎಂದು ಹೇಳಿದರು.

Ad

ಸಿದ್ದರಾಮಯ್ಯ ಸರ್ಕಾರದಲ್ಲಿ ತೊಳೆಯಲಾಗದ ಪಾಪದ ಕೂಪವಿದೆ. ಚುನಾವಣೆಯಲ್ಲಿ ಸ್ಟೀಲ್ ದುಡ್ಡು ಖರ್ಚು ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಾಗಾದರೆ, ನಿಮ್ಮದು ಯಾವ ದುಡ್ಡು. ದಲಿತರ ಹಿಂದುಳಿದ ವರ್ಗಗಳ ಅನುದಾನದಲ್ಲಿ ಲೂಟಿ ಮಾಡಿದನ್ನು ಖರ್ಚು ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಸೇರಿಸಿದ ಎ.ಎಚ್.ವಿಶ್ವನಾಥ್ ಅವರನ್ನು ಯಾವ ರೀತಿಯಲ್ಲಿ ತುಳಿದರು ಎನ್ನುವುದು ಗೊತ್ತಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸದಿದ್ದಲ್ಲಿ ಮುಖ್ಯಮಂತ್ರಿ ಆಗಲು ಎಲ್ಲಿಂದ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದರು.

Ad

ಜಿ.ಟಿ.ದೇವೇಗೌಡರು ಪಕ್ಷದ ಸರ್ವೋಚ್ಚ ನಾಯಕರು. ಕೋರ್ ಕಮಿಟಿ ಅಧ್ಯಕ್ಷರು. ನಾನಾ ಒತ್ತಡಗಳಿಂದ ಪ್ರಚಾರಕ್ಕೆ ಬಂದಿಲ್ಲದೆ ಇದ್ದರೂ ನಿಮಿಷಾಂಬ ದೇವಸ್ಥಾನದಲ್ಲಿ ನಿಖಿಲ್ ಕುವಾರಸ್ವಾಮಿ ಗೆಲುವಿಗೆ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಿದರು. ಪಕ್ಷದಲ್ಲಿ ಇದ್ದು ತಿಂದು ತೇಗಿದಲ್ಲದೆ, ಬಸ್‌ ಓಡಿಸಿಕೊಂಡು ಕರೆದುಕೊಂಡು ಹೋದಾಗ ಕುವಾರಸ್ವಾಮಿ ಬಣ್ಣ ಗೊತ್ತಿರಲಿಲ್ಲವೇ? ಮೆಕ್ಕಾ ಮದೀನಕ್ಕೆ ಹೋಗುವಾಗ ತಾಯಿಗೆ ನಮಸ್ಕಾರ ಮಾಡಿ ರಾಜಕೀಯ ಪುನರ್ಜನ್ಮ ನೀಡಿದರೆಂದು ಕುಮಾರಸ್ವಾಮಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದನ್ನು ಮರೆತುಬಿಟ್ಟಿರಬಹುದು. ಕಪ್ಪು ಬಣ್ಣ ಸತ್ಯದ ಪ್ರತೀಕ. ನಾವೆಲ್ಲರೂ ದ್ರಾವಿಡರು. ಬಹುತೇಕ ದಕ್ಷಿಣ ಭಾರತದಲ್ಲಿ ಕಪ್ಪು ಜನರೇ ಜಾಸ್ತಿಯಾಗಿದ್ದಾರೆ.

Ad

ರೈತನ ಮಗನೊಬ್ಬ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ನಾನಾ ಯೋಜನೆಗಳನ್ನು ನೀಡಿದರು. ನೀವೇನು ಮಾಡಿದ್ದೀರಿ ಎಂದು ತಿರುಗೇಟು ನೀಡಿದರು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಖರೀದಿ ಮಾಡುತ್ತೇನೆ ಎನ್ನುವುದನ್ನು ಹೇಳಿದರೆ ಎಚ್.ಡಿ.ದೇವೇಗೌಡರನ್ನು ಖರೀದಿ ಮಾಡುವ ರೀತಿಯಲ್ಲಿ ಹೇಳಿದ ಅರ್ಥ. ಮುಸ್ಲಿಂ, ಕ್ರೈಸ್ತರು, ಹಿಂದೂಗಳು ಅಣ್ಣ ತಮ್ಮಂದಿರು ಎನ್ನುವಂತೆ ಬದುಕುತ್ತಿದ್ದಾರೆ. ನಿಮ್ಮ ತಾಯಿಯ ಪಾದದ ಬಳಿ ಕುಳಿತು ಹಳೆಯದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂದು ಎಚ್.ಡಿ.ದೇವೇಗೌಡರನ್ನು ಟೀಕಿಸಿರುವ ಜಮೀರ್ ಮುಂದೆ ನಿಮ್ಮ ಟೀಕೆ ಮಾಡದೆ ಇರಲಾರರು. ನಿಮಗೆ ಸ್ವಾಭಿಮಾನ ಮತ್ತು ವ್ಯಕ್ತಿ ಗೌರವವಿದ್ದರೆ ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು. ಅಲ್ಪಸಂಖ್ಯಾತ ಸಮುದಾಯದಲ್ಲಿ ಜಮೀರ್ ಅಂತಹವರು ಹುಟ್ಟಿರುವುದು ಕಳಂಕ ಎಂದರು.

Ad

ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಜಿಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ರಾಜ್ಯ ಕಾರ್ಯದರ್ಶಿ ಎಚ್.ಕೆ.ರಾಮು, ಮಹಾಪ್ರಧಾನ ಕಾರ್ಯದರ್ಶಿ ಗಂಗಾಧರ್ ಗೌಡ, ಮಾಜಿ ಉಪ ಮೇಯರ್ ಕೃಷ್ಣ ಹಾಜರಿದ್ದರು.

Ad
Ad
Ad
Nk Channel Final 21 09 2023