ಮೈಸೂರು: ‘ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಖಂಡಿಸಿ’ ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದ ಬಳಿ ಏಕಾಂಗಿ ಪ್ರತಿಭಟನೆ ನಡೆಸಿದರು.
‘ರಾಜ್ಯಪಾಲರು ರಾಜಕಾರಣಿ ಆಗಬಾರದು.ರಾಜಭವನ ರಾಜಕೀಯ ಭವನವಾಗಬಾರದು. ಈ ಪ್ರಕರಣದಿಂದ ರಾಜ್ಯಪಾಲರು ಬೀದಿಗೆ ಬಂದಿದ್ದಾರೆ. ಈ ವಿಚಾರ ಲೋಕಸಭೆಯಲ್ಲಿ ಚರ್ಚೆಯಾಗಬೇಕು. ಮೋದಿ ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಂಡು ನೋಟಿಸ್ ಕೊಡಿಸಿರುವುದು ಖಂಡನೀಯ’ ಎಂದರು.
‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ ಹೆಚ್ಚಾಗಿದೆ. ಅದರೊಂದಿಗೆ ವಿರೋಧ ಪಕ್ಷಗಳೂ ಸಿಎಂ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ. ನಾನು ಸದನದಲ್ಲಿ ಇರುತ್ತಿದ್ದರೆ ಎಲ್ಲಾ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತಿದ್ದೆ. ಸಿದ್ದರಾಮಯ್ಯ ವಿರೋಧ ಪಕ್ಷದ ಆರೋಪಗಳಿಗೆ ಹೆದರಬಾರದು ಹಾಗೂ ಯಾವುದೇ ಕಾರಣಕ್ಕೂ ಸಿಎಂ ಹುದ್ದೆಗೆ ರಾಜೀನಾಮೆ ನೀಡಬಾರದು’ ಎಂದು ಒತ್ತಾಯಿಸಿದರು.
Ad