ಮೈಸೂರು: ಸಿದ್ದರಾಮಯ್ಯನವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಕೆಸರೆ ಗ್ರಾಮದ ಜಾಗವನ್ನ ಅರಿಶಿನ ಕುಂಕುಮ ರೂಪದಲ್ಲಿ ಕೊಟ್ಟಿದ್ದಾರೆ ಎಂದಿದ್ರು, ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ.
ಯಾಕೆ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದ ಭೂಮಿಗಳನ್ನೇ ದಾನ ಮಾಡ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಯಾಕೆ..? ಮೊದಲು ಪಾರ್ವತಿಯವರ ಕುಟುಂಬದ ಆಸ್ತಿ ಎಷ್ಟು ಎಂಬುದು ಪತ್ತೆ ಮಾಡಿ. ಮಲ್ಲಿಕಾರ್ಜುನಸ್ವಾಮಿ ಎಷ್ಟು ಆಸ್ತಿ ಖರೀದಿ ಮಾಡಿದ್ದಾರೆ ಎಂಬುದನ್ನ ತನಿಖೆ ಮಾಡಿ. 1983ರಲ್ಲಿ ಆಲನಹಳ್ಳಿ ಸರ್ವೇ ನಂಬರ್ 113/4ರಲ್ಲಿ 1 ಎಕರೆ ಖರೀದಿ ಮಾಡಿದ್ದಾರೆ.
1996ರಲ್ಲಿ ಮುಡಾ ಅಂತಿಮ ಅಧಿಸೂಚನೆ ಹೊರಡಿಸಿದ್ರು, ಡಿನೋಟಿಫೈ ಆಗಿದೆ. ಸಿದ್ದರಾಮಯ್ಯ ಪ್ರಭಾವದಿಂದ ಡಿನೋಟಿಫೈ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಅದೇ ಭೂಮಿಯನ್ನ 2010 ಅಕ್ಟೊಬರ್‌ನಲ್ಲಿ ಪಾರ್ವತಿಗೆ ದಾನ ಮಾಡಲಾಗಿದೆ. ಪಾರ್ವತಿಯವರು ಕೂಡ ಒಂದೇ ತಿಂಗಳಲ್ಲಿ ಮಗನ ಹೆಸರಿಗೆ ದಾನ ಮಾಡಿದ್ದಾರೆ.
ತಮ್ಮ ಹೆಸರಿಗೆ ಬಂದ ಭೂಮಿಯನ್ನ ಯತೀಂದ್ರ 4 ತಿಂಗಳಲ್ಲಿ ಮಾರಾಟ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಇಲ್ಲಿವರೆಗೆ ಯಾಕೆ ಸಿದ್ದರಾಮಯ್ಯನವರು ತಿಳಿಸಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಅಧಿಕಾರಿಗಳು ವಿಳಂಬ ನೀತಿ ತೋರಿಸಿದ್ರೆ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಮೈಸೂರಿನಲ್ಲಿ ಸಾಮಾಜಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.