Bengaluru 16°C

ಫುಡ್ ಝೂನ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ನಗರದ ನಗರಸಭೆ ವತಿಯಿಂದ 6ನೇ ಕ್ರಾಸ್ ನಿಂದ 9ನೇ ಕ್ರಾಸ್ ವರೆಗಿನ ಹಿಂಭಾಗದ ಗಣಪತಿ ದೇವಸ್ಥಾನ ಕವರ್ ಡೆಕ್ ಪಕ್ಕದಲ್ಲಿ ಫುಡ್ ಝೂನ್ (ಫುಡ್ ಸ್ಟ್ರೀಟ್ ) ನಿರ್ಮಿಸುವ ಜಾಗದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ

ನಂಜನಗೂಡು: ನಗರದ ನಗರಸಭೆ ವತಿಯಿಂದ 6ನೇ ಕ್ರಾಸ್ ನಿಂದ 9ನೇ ಕ್ರಾಸ್ ವರೆಗಿನ ಹಿಂಭಾಗದ ಗಣಪತಿ ದೇವಸ್ಥಾನ ಕವರ್ ಡೆಕ್ ಪಕ್ಕದಲ್ಲಿ ಫುಡ್ ಝೂನ್ (ಫುಡ್ ಸ್ಟ್ರೀಟ್ ) ನಿರ್ಮಿಸುವ ಜಾಗದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿದರು.


ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಸರ್ವರಿಗೂ ಅನುಕೂಲವಾಗುವಂತೆ ಫುಡ್ ಝೂನ್ ಅನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಇರುವ ಹಾಗೆ ನಮ್ಮ ನಂಜನಗೂಡು ನಗರದಲ್ಲಿ ಫುಡ್ ಝೂನ್ ಅನ್ನು ಉತ್ತಮವಾದ ಸೌಕರ್ಯವನ್ನು ಒಳಗೊಂಡಂತೆ ನಿರ್ಮಾಣ ಮಾಡಿ, ಎಲ್ಲರು ಒಂದೇ ಕಡೆ ಸೇರಿದರೆ ವ್ಯಾಪಾರ ಎಲ್ಲರಿಗೂ ಆಗುವಂತೆ ಪ್ರತೇಕೆ ಅವಕಾಶ ಮಾಡಿಕೊಡುತ್ತೇವೆ. ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ, ಎಲ್ಲವನ್ನು ಒಳಗೊಂಡು ಉತ್ತಮವಾದ ವ್ಯಾಪಾರ ಆಗುವ ಹಾಗೆ ಮಾಡುತ್ತೇವೆ ಎಂದು ತಿಳಿಸಿದರು.


ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಸಭಾ ಉಪಾಧ್ಯಕ್ಷೆ ರಿಯಾನಾ ಬಾನು, ನಗರಸಭೆ ಪೌರಯುಕ್ತರಾದ ವಿಜಯ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ನಗರಸಭಾ ಸದಸ್ಯರಾದ ಗಾಯತ್ರಿ, ಗಂಗಾಧರ್, ಪ್ರದೀಪ್, ಸಿದ್ದಿಕ್, ಮಂಗಳಮ್ಮ, ಬಸವರಾಜ್, ರವಿ, ದೀಪು ಸೇರಿದಂತೆ ಮುಖಂಡರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Nk Channel Final 21 09 2023