Bengaluru 24°C
Ad

ಮೈಸೂರು: ಶಪಥ ಮಾಡಲು ಜಿಟಿಡಿಗೆ ಸಾ.ರಾ ಮಹೇಶ್ ಆಹ್ವಾನ

ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತು ಯಾವುದೂ ನಡೆದಿಲ್ಲ. ನನ್ನಿಂದ ರಾಜಕೀಯವಾಗಿ ತೊಂದರೆಯಾಗಿದ್ದರೆ ಚಾಮುಂಡಿಬೆಟ್ಟಕ್ಕೆ ಬರಲಿ. ಅಲ್ಲಿಯೇ ರಾಜಕೀಯದಿಂದ ದೂರ ಇರುವ ಶಪಥ ಮಾಡುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಶಾಸಕ ಜಿ.ಟಿ.ದೇವೇಗೌಡರಿಗೆ ಆಹ್ವಾನ ನೀಡಿದರು

ಮೈಸೂರು: ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತು ಯಾವುದೂ ನಡೆದಿಲ್ಲ. ನನ್ನಿಂದ ರಾಜಕೀಯವಾಗಿ ತೊಂದರೆಯಾಗಿದ್ದರೆ ಚಾಮುಂಡಿಬೆಟ್ಟಕ್ಕೆ ಬರಲಿ. ಅಲ್ಲಿಯೇ ರಾಜಕೀಯದಿಂದ ದೂರ ಇರುವ ಶಪಥ ಮಾಡುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಶಾಸಕ ಜಿ.ಟಿ.ದೇವೇಗೌಡರಿಗೆ ಆಹ್ವಾನ ನೀಡಿದರು

Ad

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. ಯಾರಿಗೂ ತೊಂದರೆ ಕೊಟ್ಟು ರಾಜಕೀಯ ಮಾಡುವ ಅಗತ್ಯವಿಲ್ಲ. ಚಾಮುಂಡಿಬೆಟ್ಟಕ್ಕೆ ಬಂದರೆ ಅವರ ಮುಂದೆಯೇ ಹೇಳುತ್ತೇನೆ. ಮುಂದೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಇರಲ್ಲ. ನಾನು ಈಗಾಗಲೇ ರಾಜಕೀಯ ಚಟುವಟಿಕೆಗಳಿಂದ ದೂರ ಇದ್ದೇನೆ. ಜನರು ಸೋಲಿಸಿ ವಿರಾಮ ಕೊಟ್ಟ ಮೇಲೆ ನಾನು ಎಲ್ಲಿಯೂ ಕಾಣಿಸಿಕೊಂಡಿಲ್ಲ.

Ad

ನನ್ನಿಂದ ತೊಂದರೆ ಇದ್ದರೆ ಚಾಮುಂಡಿಬೆಟ್ಟಕ್ಕೆ ಬಂದರೆ ರಾಜಕೀಯದಿಂದಲೇ ದೂರ ಇರುವ ಶಪಥ ಮಾಡುತ್ತೇನೆ. ಆದರೆ, ಸಾಯುವವರೆಗೂ ಎಚ್.ಡಿ.ಕುಮಾರಸ್ವಾಮಿ ಜತೆ ಇರುತ್ತೇನೆ. ಒಂದು ವೇಳೆ ಜತೆಗಿರುವುದರಿಂದಲೂ ತೊಂದರೆಯಾದರೆ ಫೋನ್‌ನಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಜಿ.ಟಿ.ದೇವೇಗೌಡರು ಇಷ್ಟು ಮಾತನಾಡಿರುವುದು ಗೊತ್ತಿಲ್ಲ. ಸರಿಯಾದ ವೇದಿಕೆ ಸಿಕ್ಕಿದರೆ ಮಾತನಾಡುತ್ತೇನೆ. ನಮ್ಮ ನಾಯಕರು ಅನುಮತಿ ಕೊಟ್ಟರೆ ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತನಾಡುವೆ ಎಂದು ಹೇಳಿದರು.

Ad

ಯೋಗೇಶ್ವರ್ ಅವರನ್ನು ಜತೆಗೆ ಜೊತೆಗೆ ಇಟ್ಟುಕೊಳ್ಳಬೇಕಿತ್ತು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಟಿಡಿ ಅವರು ಅವರ ಅನುಭವದಲ್ಲಿ ಈ ಮಾತನ್ನು ಹೇಳಿರಬಹುದು. ಯೋಗೇಶ್ವರ್ ಅವರನ್ನು ನಾನೇ ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಅವರು ಬಿಜೆಪಿ ಗುರುತಿನಡಿ ನಿಲ್ಲಬೇಕು ಅಂದಾಗ ಅದಕ್ಕೂ ಒಪ್ಪಿಕೊಂಡು ಬಂದಿದ್ದೆವು. ಆದರೆ, ಸಂಜೆ ಹೊತ್ತಿಗೆ ಯೋಗೇಶ್ವರ್ ಬೇರೆ ಪಕ್ಷದಲ್ಲಿ ಇದ್ದರು. ಈಗ ಕಾರಣ ಹೇಳುತ್ತಿದ್ದಾರೆ ಎಷ್ಟೇ ಎಂದರು.

Ad

ಜಿಟಿಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ನಂತರ, ವಿರೋಧ ಪಕ್ಷದ ನಾಯಕ ಸ್ಥಾನ ತಪ್ಪಿಸಿದ್ದು ಯಾರೆಂದು ಹೇಳಿದರೆ ಕುಮಾರಸ್ವಾಮಿ ಅವರಿಗೆ ಹೇಳಿ ದೂರ ಇಡುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

Ad
Ad
Ad
Nk Channel Final 21 09 2023