ಮೈಸೂರು: ಟೂರ್ ಆಫ್ ನೀಲಗಿರಿಸ್ ಗೆ ಸೈಕ್ಲಿಸ್ಟ್ ತಂಡದೊಂದಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೈಕಲ್ ಸವಾರಿ ಮಾಡುವ ಮೂಲಕ ಗಮನ ಸೆಳೆದರು.
ನಗರ ಹೊಟೇಲ್ ರಿಯೋ ಮೆರಿಡಿಯನ್ ಆವರಣದಲ್ಲಿ ಭಾನುವಾರ ಬೆಳಗ್ಗೆ ಟೂರ್ ಆಫ್ ನೀಲಗಿರಿ 2024 ಸೈಕಲಿಂಗ್ ಮ್ಯಾರಾಥಾನ್ ಗೆ ಚಾಲನೆ ನೀಡಿದ ಸಚಿವರು, ಸೈಕಲ್ ಸವಾರರೊಂದಿಗೆ ಸುಮಾರು 10 ಕಿ.ಮೀ ಸೈಕಲ್ ಸವಾರಿ ಮಾಡಿದರು.
ನಂತರ ಮಾತನಾಡಿದ ಸಚಿವರು, ಸೈಕಲ್ ಸವಾರಿ ಮಾಡುವುದು ನನಗೂ ಇಷ್ಟ. ಆರೋಗ್ಯ ದೃಷ್ಟಿಯಿಂದ ಸೈಕಲ್ ಸವಾರಿ ಮಾಡಬೇಕು. ಈ ಮ್ಯಾರಾಥಾನ್ ನಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆದರೆ, ಕೆಲಸದ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.
ಟೂರ್ ಆಫ್ ನೀಲಗಿರಿಸ್ ಸೈಕಲ್ ಸವಾರಿಯು ಡಿ.15 ರವರೆಗೆ ನಡೆಯಲಿದ್ದು, ವಿವಿಧ ರಾಜ್ಯ ಹಾಗೂ ದೇಶಗಳಿಂದ 80 ಜನ ಸೈಕ್ಲಿಸ್ಟ್ ಗಳು ಪಾಲ್ಗೊಂಡಿದ್ದಾರೆ. ಇವರು 8 ದಿನದಲ್ಲಿ 800 ಕಿ.ಮೀ ಸಂಚಾರ ಮಾಡಲಿದ್ದಾರೆ. ಮೈಸೂರಿನಿಂದ ಆರಂಭವಾಗಿರುವ ಈ ಸೈಕಲ್ ಸವಾರಿಯು ವಿರಾಜಪೇಟೆ, ಸುಲ್ತಾನ್ ಬತ್ತೇರಿ, ಊಟಿ ಸೇರಿದಂತೆ ವಿವಿಧೆಡೆ ಸಂಚರಿಸಿ ಡಿ.15 ರಂದು ಕೊಯಮತ್ತೂರಿನಲ್ಲಿ ಅಂತ್ಯವಾಗಲಿದೆ.